ಕರ್ನಾಟಕ

karnataka

ETV Bharat / sitara

10ನೇ ತರಗತಿಯಲ್ಲೇ ಪ್ರೀತಿಸಿ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದೆ: ಕಬೀರ್​ ಸಿಂಗ್​ ಬೆಡಗಿಯ ಬೋಲ್ಡ್​ ಮಾತು - ಲವ್ಲಿ ಮಾತು

ಕಿಯಾರಾ ಅಡ್ವಾಣಿ ಯಾರಿಗೆ ಗೊತ್ತಿಲ್ಲಾ ಹೇಳಿ. ಚಿಕ್ಕ ವಯಸ್ಸಿನಲ್ಲೇ ಈಗ ಬಾಲಿವುಡ್​ನ ಸೂಪರ್​ ಸ್ಟಾರ್​ ಆಗಿ ಹೆಸರು ಮಾಡಿದಾಕೆ. ತನ್ನ ನೋಟದಿಂದಲೇ ಪಡ್ಡೆ ಹುಡುಗರ ಮನಸ್ಸು ಕದ್ದಿರುವ ಈ ಚೆಲುವೆ 10ನೇ ಕ್ಲಾಸ್​ನಲ್ಲೇ ಲವ್​ನಲ್ಲಿ ಬಿದ್ದದ್ದಳಂತೆ...

ಕೃಪೆ: Twitter

By

Published : Jun 22, 2019, 11:14 AM IST

ಹೌದು, ಕಿಯಾರಾ ಅಡ್ವಾಣಿ ತಮ್ಮ ಲವ್​ ಮ್ಯಾಟರ್​ ಬಗ್ಗೆ ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ಬಿಡುಗಡೆಗೊಂಡು ಭರ್ಜರಿ ಓಪನಿಂಗ್​ ಪಡೆದ ಕಬೀರ್​ ಸಿಂಗ್​ ಸಿನಿಮಾ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗುತ್ತಿದೆ. ಕಿಯಾರಾ ಮತ್ತು ಶಾಹಿದ್​ ಕಪೂರ್​ ಆಕ್ಟಿಂಗ್​ಗೆ ಜನರು ಫುಲ್​ ಫಿದಾ ಆಗುತ್ತಿದ್ದಾರೆ. ಚಿತ್ರ ರಿಲೀಸ್​ಗೂ ಮುನ್ನ ನಟಿ ಕಿಯಾರಾ ಜೀವಿತದ ಬಗ್ಗೆ ಆಂಗ್ಲ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಅದರಲ್ಲಿ ಕಿಯಾರಾ ತಮ್ಮ ಪ್ರೀತಿ ಬಗ್ಗೆ ಹಂಚಿಕೊಂಡಿದ್ದಾರೆ.

ಕೃಪೆ: Twitter

ನಾನು ಜೀವನದಲ್ಲಿ ಒಂದೇ ಸಾರಿ ಲವ್​ನಲ್ಲಿ ಬಿದ್ದಿದ್ದು. ಕೇವಲ ಆತನೊಂದಿಗೆ ಹೆಚ್ಚು ಬಂಧನಲ್ಲಿದ್ದೆ. ನಾವಿಬ್ಬರೂ ಜೊತೆಗೂಡಿ ಬೆಳೆದಿದ್ದೇವೆ. ಹೀಗಾಗಿ ನಮ್ಮ ಮಧ್ಯೆ ಸ್ನೇಹ ಪ್ರೇಮವಾಯ್ತು. ಈಗ ಆತ ನನ್ನ ಬೆಸ್ಟ್​ ಫ್ರೆಂಡ್​ ಅಷ್ಟೇ. ನನಗೆ ಸಂತೋಷವಿದ್ದರೂ, ದುಖವಾದ್ರೂ ಆತನೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಕಿಯಾರಾ ಹೇಳಿಕೊಂಡಿದ್ದಾರೆ.

ನಾನು 10ನೇ ತರಗತಿಯಲ್ಲೇ ಲವ್​ನಲ್ಲಿ ಬಿದ್ದಿದೆ. ಒಂದು ದಿನ ಆತನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಿದ್ದಾಗ ಅಮ್ಮನ ಕೈಗೆ ಸಿಕ್ಕಿಬಿದ್ದಿದೆ. ಅಮ್ಮ ಆತನೊಂದಿಗೆ ಮಾತನಾಡದಂತೆ ವಾರ್ನಿಂಗ್​ ಕೊಟ್ಟಿದ್ದರು. ಏನಾದ್ರೂ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್​ ತೆಗೆದುಕೊಂಡ್ರೆ ಪರಿಸ್ಥಿತಿ ನೆಟ್ಟಗಿರಲ್ಲ ಅಂತಾನೂ ಎಚ್ಚರಿಸಿದ್ದರು. ನನ್ನ ತಾಯಿಗಾಗಿ ಆತನನ್ನು ದೂರ ಮಾಡಿದೆ ಎಂದು ಕಿಯಾರಾ ತಮ್ಮ ಲವ್ ಬ್ರೇಕ್​​ ಅಪ್​ ಬಗ್ಗೆ ಹೇಳಿದ್ದಾರೆ.

ಕೃಪೆ: Twitter

ಕಬೀರ್​ ಸಿಂಗ್​ ಚಿತ್ರದ ಕಥೆಯಂತೆ ‘ನೀವು ಪರಿಸ್ಥಿತಿಯಿಂದಲೇ ನಿಮ್ಮ ಪ್ರೀತಿಯನ್ನು ದೂರ ಮಾಡಿಕೊಂಡಿದ್ದೀರಾ?’ ಎಂದು ಪ್ರಶ್ನಿಸಿದಾಗ... ‘ಮನಸೆಲ್ಲಾ ಆ ಸ್ಟೇಜ್​ನಿಂದಲೇ ಬಂದಿದ್ದು... ಪ್ರೀತಿ ದೂರವಾದಾಗ್ಲೂ ನಾನು ಬೆಡ್​​ನಿಂದ ಎದ್ದು ಬರುತ್ತಿರಲಿಲ್ಲ. ಮನೆಯಲ್ಲೇ ಕಾಲ ಕಳೆಯುತ್ತಿದ್ದೆ. ಆತನಿಗಾಗಿ ಅದೆಷ್ಟೋ ಬಾರಿ ಕಣ್ಣೀರು ಹಾಕಿದ್ದೆ. ಇದರಿಂದ ನನ್ನ ಸ್ನೇಹಿತರು ಆ ಗುಂಗಿನಿಂದ ಹೊರಬರುವಂತೆ ಎಷ್ಟೋ ಬಾರಿ ಹೇಳಿದರು. ಆ ವ್ಯಕ್ತಿಯನ್ನು ಬಿಟ್ಟು ಮುಂದಕ್ಕೆ ಬರಲು ನನಗೆ ಕಷ್ಟದ ಕೆಲಸವಾಯಿತು. ಆದ್ರೂ ಆತನಿಂದ ದೂರ ಬಂದಿದ್ದು, ಈಗ ನಾನು ಸಿಂಗಲ್​ ಆಗಿಯೇ ಇದ್ದೇನಿ ಅಂತಾ ನಟಿ ಕಿಯಾರಾ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ನಟಿ ಕಿಯಾರಾ ಅಡ್ವಾಣಿ ಹಿಂದಿ, ತೆಲುಗು ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸು ದೋಚಿದ್ದಾರೆ. ನಿನ್ನೆ ಬಿಡುಗಡೆಗೊಂಡ ಕಬೀರ್​ ಸಿಂಗ್​ ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ತೆಲುಗಿನ ಅರ್ಜುನ್​ ರೆಡ್ಡಿ ರಿಮೆಕ್​ ಆಗಿದೆ.

ABOUT THE AUTHOR

...view details