ಮುಂಬೈ: ಕೋವಿಡ್-19 ಪರಿಹಾರ ನಿಧಿ ಸಂಗ್ರಹಣೆಗಾಗಿ ಆಯೋಜನೆ ಮಾಡಿರುವ ಭಾರತದ ಅತಿ ದೊಡ್ಡ ವರ್ಚುವಲ್ ಸಂಗೀತ ಕಾರ್ಯಕ್ರಮ 'ಐ ಪಾರ್ ಇಂಡಿಯಾ' ದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಭಾಗವಹಿಸಲಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ಟೀಟ್ ಮಾಡಿರುವ ಕಿಂಗ್ ಖಾನ್ 'ದೆಖಿಯೇ ಔರ್ ಯಾದ್ ರಖಿಯೇ... ಸಬ್ ಸಹಿ ಹೋ ಜಯೇಗಾ' ಎಂದು ಕಾರ್ಯಕ್ರಮವನ್ನು ವೀಕ್ಷಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಲವಾರು ಸಿನಿ ತಾರೆಯರು ಇಂದು ಬೆಳಿಗ್ಗಿನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮ ವೀಕ್ಷಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಕರಣ್ ಜೋಹರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಂಗೀತ ಕಚೇರಿ ಮನರಂಜನೆಯ ಜೊತೆ ಕೋವಿಡ್-19 ಪರಿಹಾರ ನಿಧಿ ಸಂಗ್ರಹಿಸುವ ಉದ್ದೇಶ ಹೊಂದಿದೆ.
ವರ್ಚುವಲ್ ಸಂಗೀತ ಕಾರ್ಯಕ್ರಮ 'ಐ ಪಾರ್ ಇಂಡಿಯಾ'
'ಐ ಫಾರ್ ಇಂಡಿಯಾ' ವರ್ಚುವಲ್ ಕನ್ಸರ್ಟ್ ಆಯೋಜಿಸಲು ನಿರ್ದೇಶಕ ಜೊಯಾ ಅಖ್ತರ್ ಕೈಜೋಡಿಸಿದ್ದಾರೆ. ಎಸ್‌ಆರ್‌ಕೆ ಸೇರಿ ಕರೀನಾ ಕಪೂರ್ ಖಾನ್, ಆಲಿಯಾ ಭಟ್, ಎ. ಆರ್. ರಹಮಾನ್, ಕರೀನಾ ಕಪೂರ್ ಖಾನ್, ಅರಿಜಿತ್ ಸಿಂಗ್, ಅನುಷ್ಕಾ ಶರ್ಮಾ, ಹೃತಿಕ್ ರೋಷನ್, ಫರ್ಹಾನ್ ಅಖ್ತರ್ ಮತ್ತು ಬ್ಯಾಂಡ್, ಜಾವೇದ್ ಅಖ್ತರ್, ಮಾಧುರಿ ದೀಕ್ಷಿತ್, ವಿಕ್ಕಿ ಕೌಶಲ್ ಹಾಗೂ 85 ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.
ಅಲ್ಲದೆ ಈವೆಂಟ್ನಲ್ಲಿ ಸಂಗೀತಗಾರ ಜೋ ಜೊನಸ್, ಕೆವಿನ್ ಜೊನಾಸ್, ಬ್ರಿಯಾನ್ ಆಡಮ್ಸ್, ನಿಕ್ ಜೊನಸ್, ಗೋಟ್ ಸ್ಟಾರ್ ಸೋಫಿ ಟರ್ನರ್ ಮತ್ತು ಹಾಸ್ಯನಟ ಮಿಂಡಿ ಕಾಲಿಂಗ್ ಮತ್ತು ಲಿಲ್ಲಿ ಸಿಂಗ್ ಅವರಂತಹ ಕೆಲವು ವರ್ಲ್ಡ್ ಫೇಮಸ್ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ವರ್ಚುವಲ್ ಕನ್ಸರ್ಟ್ ಇಂದು ಸಂಜೆ 7.30 ಕ್ಕೆ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರವಾಗಲಿದೆ.