ಕರ್ನಾಟಕ

karnataka

ETV Bharat / sitara

ದೀಪಿಕಾ ಪಡುಕೋಣೆ ಕುರಿತ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಕಂಗನಾ ರಣಾವತ್ - ದೀಪಿಕಾ ಪಡುಕೋಣೆ ಮತ್ತು ಕಂಗನಾ ರಣಾವತ್

ಬಾಲಿವುಡ್​ ನಟಿ ಕಂಗನಾ ರಣಾವತ್ ಲಾಕ್ ಅಪ್ ಎಂಬ ರಿಯಾಲಿಟಿ ಶೋ ಅನ್ನು ಹೋಸ್ಟ್ ಮಾಡುತ್ತಿದ್ದು, ಈ ಶೋ ಅನ್ನು ಏಕ್ತಾ ಕಪೂರ್ ನಿರ್ದೇಶಿಸುತ್ತಿದ್ದಾರೆ.

I don't need to take inspiration from anyone: Kangana Ranaut
ದೀಪಿಕಾ ಪಡುಕೋಣೆ ಕುರಿತ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಕಂಗನಾ ರಣಾವತ್

By

Published : Feb 5, 2022, 7:27 AM IST

ಬಾಲಿವುಡ್​ನಲ್ಲಿ ಸದ್ದು ಮಾಡುತ್ತಿರುವ ನಟಿ ಕಂಗನಾ ರಣಾವತ್ ಈಗ ರಿಯಾಲಿಟಿ ಶೋಗೂ ಕಾಲಿಟ್ಟಿದ್ದಾರೆ. ಹೊಸ ರಿಯಾಲಿಟಿ ಶೋ ಕುರಿತ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಕಂಗನಾ ರಣಾವತ್ ನಾನು ಯಾರಿಂದಲೂ ಸ್ಫೂರ್ತಿ ಪಡೆಯುವ ಅಗತ್ಯತೆ ಇಲ್ಲ. ನಾನು ಯಾರನ್ನೂ ನಕಲು ಮಾಡುವುದಿಲ್ಲ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಲಾಕ್ ಅಪ್ (Lock Upp) ಎಂಬ ರಿಯಾಲಿಟಿ ಶೋ ಅನ್ನು ಕಂಗನಾ ರಣಾವತ್ ಹೋಸ್ಟ್ ಮಾಡುತ್ತಿದ್ದಾರೆ. ಈ ವೇಳೆ 'ನೀವು ಯಾರಿಂದಾದರೂ ಸ್ಫೂರ್ತಿ ಪಡೆದಿದ್ದೀರಾ?' ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಕಂಗನಾ ನಾನು ಯಾರಿಂದಲೂ ಸ್ಫೂರ್ತಿ ಪಡೆಯುವ ಅಗತ್ಯವಿಲ್ಲ. ನೀವು ನೀವೇ ಆಗಿರಬೇಕು. ಯಾರನ್ನೂ ನಾನು ನಕಲು ಮಾಡುವುದಿಲ್ಲ ಎಂದಿದ್ದಾರೆ.

ದೀಪಿಕಾ ಪಡುಕೋಣೆ ಕುರಿತ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಕಂಗನಾ ರಣಾವತ್

ನಟಿ ದೀಪಿಕಾ ಪಡುಕೋಣೆ ಅವರ ಕುರಿತ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಕಂಗನಾ ರಣಾವತ್, ಅವರ ಸಿನಿಮಾವನ್ನು ಈ ವೇದಿಕೆಯಲ್ಲಿ ಪ್ರಚಾರ ಮಾಡಲು ಬಯಸುವುದಿಲ್ಲ ಎಂದು ವರದಿಗಾರರ ಪ್ರಶ್ನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಲಾಕ್ ಅಪ್ ರಿಯಾಲಿಟಿ ಶೋ ಅನ್ನು ಏಕ್ತಾ ಕಪೂರ್ ನಿರ್ದೇಶಿಸುತ್ತಿದ್ದು, ಫೆಬ್ರವರಿ 27ರಿಂದ ALTBalaji ಮತ್ತು MX Player ಅಪ್ಲಿಕೇಷನ್​ನಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬ್ಯೂಟಿ ಕ್ವೀನ್ ಕರಿಷ್ಮಾ ತನ್ನಾ

ABOUT THE AUTHOR

...view details