‘ಆರ್ಮಿ ಆಫ್ ದಿ ಡೆಡ್’ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ ಹುಮಾ ಅಭಿಮಾನಿಗಳ ದಿಲ್ ಖುಷ್ ಆಗಿತ್ತು. ಏಕೆಂದರೆ, ಚಿತ್ರದ ಟ್ರೇಲರ್ನಲ್ಲಿ ಹುಮಾ ಅಭಿನಯದ ಕೆಲವು ಆಕರ್ಷಕ ತುಣುಕುಗಳಿದ್ದವು. ಇದನ್ನು ನೋಡಿ ಅವರಿಗೆ ಚಿತ್ರದಲ್ಲಿ ದೊಡ್ಡ ಪಾತ್ರವೇ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು.
ಸಣ್ಣ ಪಾತ್ರಕ್ಕೆ ಅಷ್ಟೊಂದು ಬಿಲ್ಡಪ್ ತಗೊಂಡ್ರಾ ಹುಮಾ ಖುರೇಷಿ? ಸಿನಿರಸಿಕರ ಪ್ರಶ್ನೆ - ಬಾಲಿವುಡ್ ನಟಿ ಹುಮಾ ಖರೇಷಿ,
ಹಾಲಿವುಡ್ ಚಿತ್ರಗಳಲ್ಲಿ ಬಾಲಿವುಡ್ ಕಲಾವಿದರು ನಟಿಸುವುದು ಟ್ರೆಂಡ್ ಆಗಿದೆ. ಜಾಕ್ ಸ್ನೈಡರ್ ನಿರ್ದೇಶನದ ‘ಆರ್ಮಿ ಆಫ್ ದಿ ಡೆಡ್’ ಚಿತ್ರದಲ್ಲಿ ಹುಮಾ ಖುರೇಷಿ ಒಂದು ಪಾತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾದಾಗ ಎಲ್ಲರೂ ಬಹಳ ಖುಷಿಯಾಗಿದ್ದರು. ಈಗ ನೆಟ್ಫ್ಲಿಕ್ಸ್ನಲ್ಲಿ ಚಿತ್ರ ನೋಡಿದವರೆಲ್ಲ ಹುಬ್ಬೇರಿಸುವಂತಾಗಿದೆ. ಏಕೆ ಗೊತ್ತೇ?
ಆದ್ರೆ ಈ ಊಹೆ ಸುಳ್ಳಾಗಿದೆ. ಚಿತ್ರದಲ್ಲಿ ಹುಮಾ ಕೆಲವೇ ಕೆಲವು ನಿಮಿಷಗಳ ಕಾಲ ಮಾತ್ರ ತೆರೆಯ ಮೇಲೆ ಬರಲಿದ್ದು, ಅದಕ್ಕೆ ಅವರೇ ಬೇಕಿತ್ತಾ ಎಂಬ ಪ್ರಶ್ನೆ ಚಿತ್ರ ಪ್ರೇಮಿಗಳದ್ದು. ಯಾರು ಬೇಕಾದರೂ ಮಾಡಬಹುದಾದ ಪಾತ್ರಕ್ಕೆ ಅಷ್ಟೊಂದು ಬಿಲ್ಡಪ್ ಕೊಟ್ಟು ಹುಮಾ ಅವರನ್ನೇ ಆಯ್ಕೆ ಮಾಡಿದ್ದೇಕೆ? ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.
ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ಅನಿಲ್ ಕಪೂರ್ ಅವರಿಗಿದ್ದ ಸ್ಪೇಸ್ಗಿಂತ ಕಡಿಮೆ ಸ್ಪೇಸ್ ಹುಮಾಗೆ ‘ಆರ್ಮಿ ಆಫ್ ದಿ ಡೆಡ್’ನಲ್ಲಿ ಸಿಕ್ಕಿದೆ ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಚಿತ್ರದಲ್ಲಿ ಹುಮಾಗೆ ಯಾವುದೇ ಸ್ಕೋಪ್ ಇಲ್ಲ ಮತ್ತು ಯಾರು ಬೇಕಾದರೂ ಆ ಪಾತ್ರವನ್ನು ಮಾಡಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.