ಮುಂಬೈ: ಕೊರೊನಾ ಲಾಕ್ ಡೌನ್ ಚಿತ್ರೋದ್ಯಮದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದ್ದು, ಈ ವರ್ಷ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಮಾಡುವುದು ಅಸಾಧ್ಯವೆಂದು ಅರಿತಿರುವ ಕೆಲ ನಿರ್ಮಾಪಕರು ಒಟಿಟಿ ಫ್ಲ್ಯಾಟ್ ಫಾರ್ಮ್ನಲ್ಲಿ ಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ.
ಅಕ್ಷಯ್ ಕುಮಾರ್ ಮತ್ತು ಖಿಯಾರ ಅಡ್ವಾಣಿ ನಟನೆಯ 'ಲಕ್ಷ್ಮಿ ಬಾಂಬ್' ಚಿತ್ರವನ್ನು ಒಟಿಟಿ ಫ್ಲ್ಯಾಟ್ ಫಾರ್ಮ್ನಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಮುಂದಾಗಿದ್ದು, ಮೂಲಗಳ ಪ್ರಕಾರ ಹಾಟ್ ಸ್ಟಾರ್ನಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುವಾಗ ಅದರ ಡಿಜಿಟಲ್ ರೈಟ್ ಗರಿಷ್ಠ 60 ರಿಂದ 70 ಕೋಟಿ ರೂ.ಗೆ ಮಾರಾಟವಾಗುತ್ತದೆ. ಇದೀಗ ಚಿತ್ರ ನೇರವಾಗಿ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಗೊಳ್ಳುವುದರಿಂದ ಈ ಮೊತ್ತ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ಒಟಿಟಿ ಫ್ಲ್ಯಾಟ್ ಫಾರ್ಮ್ನಲ್ಲಿ ಚಿತ್ರ ಬಿಡುಗಡೆ 140 ಕೋಟಿ ರೂ ಡಿಜಿಟಲ್ ರೈಟ್ ಆಗಲಿದೆ ಎಂದು ಸುದ್ದಿ ತಾಣವೊಂದು ತಿಳಿಸಿದ್ದು, ಲಕ್ಷ್ಮಿ ಬಾಂಬ್ ಚಿತ್ರವೂ ಸುಮಾರು 125 ಕೋಟಿ ರೂ.ಗೆ ಸೇಲ್ ಆಗಿದೆ ಎಂದು ಇದೀಗ ತಿಳಿದುಬಂದಿದೆ. ಯಾಕೆಂದರೆ, ಸಲ್ಮಾನ್ ಖಾನ್ ನಟನೆಯ 'ರಾಧೆ' ಚಿತ್ರದೊಂದಿಗೆ ಪೈಪೋಟಿ ನಡೆಸಿದರು ಈ ಚಿತ್ರಕ್ಕೆ 200 ಕೋಟಿ ಬಾಚಿಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.