ಹೈದರಾಬಾದ್ (ತೆಲಂಗಾಣ):ಬಾಲಿವುಡ್ ನಟ ಹೃತಿಕ್ ರೋಷನ್ ಯುವತಿಯೋರ್ವಳ ಜೊತೆ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ಹೃತಿಕ್ ಯುವತಿಯ ಕೈಯನ್ನು ಹಿಡಿದುಕೊಂಡು ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವುದನ್ನು ಕಾಣಬಹುದು. ಇವರ ಹಾವಭಾವವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಶುಕ್ರವಾರ ರಾತ್ರಿ ಹೃತಿಕ್ ರೋಷನ್ ಮುಂಬೈನ ರೆಸ್ಟೋರೆಂಟ್‌ನ ಹೊರಗೆ ಕಾಣಿಸಿಕೊಂಡಿದ್ದಾರೆ. ನಟನ ಜೊತೆಯಲ್ಲಿ ಗೆಳೆಯರ ದಂಡೇ ಇತ್ತು. ಆದರೆ ಹೃತಿಕ್ ಅಪರಿಚಿತ ಯುವತಿ ಕೈಯನ್ನು ಹಿಡಿದು ತನ್ನ ಕಾರಿಗೆ ಕರೆದೊಯ್ದ ರೀತಿ ಅವರ ಡೇಟಿಂಗ್ ಜೀವನದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.