ಬಾಲಿವುಡ್ನಲ್ಲಿ ನಟ ಹೃತಿಕ್ ರೋಷನ್ ಹಾಗೂ ಕಂಗನಾ ರಣಾವತ್ ನಡುವಿನ ಆರೋಪ - ಪ್ರತ್ಯಾರೋಪ ಇಡೀ ಬಿಟೌನ್ನಲ್ಲೇ ಚರ್ಚೆಯಾಗಿತ್ತು. ಹೃತಿಕ್ ಅಭಿನಯದ 'ಸೂಪರ್ 30' ಹಾಗೂ ಕಂಗನಾ ಅಭಿನಯದ 'ಮೆಂಟಲ್ ಹೈ ಕ್ಯಾ' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಇದಕ್ಕೆ ಕೂಡಾ ಕಂಗನಾ ತಂಗಿ ರಂಗೋಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಎಲ್ಲ ತಣ್ಣಗಾಯಿತು ಎಂದುಕೊಳ್ಳುತ್ತಿರುವಾಗಲೇ ಕಂಗನಾ ತಂಗಿ ರಂಗೋಲಿ ಇತ್ತೀಚೆಗೆ ಟ್ವಿಟರ್ನಲ್ಲಿ ದೊಡ್ಡ ಬಾಂಬ್ ಸಿಡಿಸಿದ್ದರು. 'ಹೃತಿಕ್ ಅಕ್ಕ ಸುನೈನಾ ರೋಷನ್ ಮುಸ್ಲಿಂ ಹುಡುಗನನ್ನು ಪ್ರೀತಿಸುತ್ತಿದ್ದು ಈ ಬಗ್ಗೆ ಸಹಾಯ ಬೇಡಿಕೊಂಡು ನನ್ನ ಅಕ್ಕ ಕಂಗನಾ ಬಳಿ ಬಂದಿದ್ದರು. ಆಕೆ ಪ್ರೀತಿಸುತ್ತಿರುವ ಹುಡುಗ ಮುಸ್ಲಿಂ ಎಂಬ ಕಾರಣಕ್ಕೆ ಆಕೆ ಮನೆಯವರು ಸುನೈನಾಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ. ಅಪ್ಪ ರಾಕೇಶ್ ರೋಷನ್ ಸುನೈನಾಗೆ ಥಳಿಸಿದ್ದಾರೆ. ತಮ್ಮ ಹೃತಿಕ್ ರೋಷನ್ ತನ್ನ ಅಕ್ಕನನ್ನೇ ಜೈಲಿಗೆ ಕಳಿಸಲು ಪ್ರಯತ್ನಿಸುತ್ತಿದ್ದಾನೆ. ಕಳೆದ ವಾರ ಮಹಿಳಾ ಪೊಲೀಸ್ ಕೂಡಾ ಸುನೈನಾ ಕೆನ್ನೆಗೆ ಹೊಡೆದಿದ್ದಾರೆ ' ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಇದೀಗ ಹಾಟ್ ಟಾಪಿಕ್ ಆಗಿದೆ.
ಇದೀಗ ಸುನೈನಾ ರೋಷನ್ ಕೂಡಾ ಒಂದು ಟ್ವೀಟ್ ಮಾಡಿದ್ದು 'ನಾನು ನಿತ್ಯ ನರಕದಲ್ಲೇ ಬದುಕುತ್ತಿದ್ದೇನೆ..ನನಗೆ ಸಾಕಾಗಿದೆ' ಎಂದು ಹೇಳಿಕೊಂಡಿದ್ದರು. ಕಾರ್ಯಕ್ರಮವೊಂದರಲ್ಲಿ ಕೂಡಾ 'ಹೌದು, ನನ್ನ ಅಪ್ಪ ನನಗೆ ಹೊಡೆದದ್ದು ನಿಜ. ನಾನು ಪ್ರೀತಿಸುತ್ತಿರುವ ಹುಡುಗ ಭಯೋತ್ಪಾದಕ ಎಂಬ ಪಟ್ಟ ನೀಡಿ ಪ್ರೀತಿಗೆ ನಿರಾಕರಿಸಿರುವುದಲ್ಲದೇ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಆದರೆ ನನ್ನ ಹುಡುಗ ಪತ್ರಕರ್ತ, ಭಯೋತ್ಪಾದಕ ಅಲ್ಲ' ಎಂದು ಹೇಳಿಕೊಂಡಿದ್ದರು. ಅಲ್ಲದೆ ಸಂದರ್ಶನವೊಂದರಲ್ಲಿ 'ನಾನು ಮನೆಯಲ್ಲಿ ನನ್ನ ಖರ್ಚಿಗೆ ಹಣ ಕೇಳಿದ್ದೆ. ಆದರೆ ಹಣ ಕೊಡಲು ನಿರಾಕರಿಸಿದರು. ನಿನ್ನೆ 50,000 ಕೊಟ್ಟು ಇಡೀ ತಿಂಗಳು ಅದೇ ಹಣವನ್ನು ಹೊಂದಿಸಿಕೊಂಡು ಹೋಗುವಂತೆ ಹೇಳಿದ್ದಾರೆ. ಏಕೆ ಅದಕ್ಕಿಂತ ಹೆಚ್ಚು ಹಣ ಖರ್ಚು ಮಾಡಲು ನನಗೆ ಹಕ್ಕಿಲ್ಲವೇ..? ನಾನು ಅವರ ಮನೆ ಮಗಳು ತಾನೇ..? ಎಂದು ಸುನೈನಾ ಹೇಳಿಕೊಂಡಿದ್ದರು. ಆದರೆ ಸುನೈನಾ ಅವರ ಈ ಮಾತಿಗೆ ಸಾಕಷ್ಟು ನೆಟಿಜನ್ಸ್ ವಿರೋಧ ವ್ಯಕ್ತಪಡಿಸಿದ್ದರು. ನಿನಗೆ ಈಗ 47 ವರ್ಷ ವಯಸ್ಸು, ಈ ಸಮಯದಲ್ಲಿ ಹಣಕ್ಕಾಗಿ ಮನೆಯವರನ್ನು ಅವಲಂಬಿಸುವುದು ಸರಿಯಲ್ಲ, ಒಂದು ಕೆಲಸ ಹುಡುಕಿ ನಿನ್ನ ಖರ್ಚನ್ನು ನೀನು ನೋಡಿಕೋ ಎಂದು ಕಮೆಂಟ್ ಮಾಡಿದ್ದರು.
ಒಟ್ಟಿನಲ್ಲಿ ವೈವಾಹಿಕ ಜೀವನದಲ್ಲಿ ವಿಚ್ಛೇದನ, ಕಂಗನಾ ರಣಾವತ್ ಮಿಟೂ ಆರೋಪ, ಅಕ್ಕನ ಪ್ರೀತಿ - ಪ್ರೇಮದ ವಿಚಾರ ಎಲ್ಲಾ ಹೃತಿಕ್ ತಲೆ ಮೇಲೆ ಬಂದು ಕೂತಿದೆ. ಇವನ್ನೆಲ್ಲಾ ಹೃತಿಕ್ ಹೇಗೆ ನಿಭಾಯಿಸುವರೋ...ಈ ವಿವಾದ ಎಲ್ಲಿಗೆ ಬಂದು ಮುಟ್ಟುವುದೋ ಕಾದು ನೋಡಬೇಕು.
ರಾಕೇಶ್ ರೋಷನ್, ಹೃತಿಕ್ ರೋಷನ್