ಕರ್ನಾಟಕ

karnataka

ETV Bharat / sitara

'ಚಿಗುರಿದ ಪ್ರೀತಿ'... ಹೃತಿಕ್​​​ ವರ್ಕೌಟ್​​​​​ ವಿಡಿಯೋಗೆ ಮಾಜಿ ಪತ್ನಿ ಫಿದಾ - undefined

ಗ್ರೀಕ್ ಗಾಡ್​ ಹೃತಿಕ್​ ಜಿಮ್​ ವರ್ಕೌಟ್ ವಿಡಿಯೋಗೆ ಅವರ ಮಾಜಿ ಪತ್ನಿ ಸುಸೇನ್ ರೋಷನ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ವಿಡಿಯೋ ನೋಡಿ 20 ವರ್ಷ ಹಿಂದಿನ ದಿನಮಾನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಆಗಿನಕ್ಕಿಂತ ನೀವು ಈಗ ಸಖತ್​ ಹಾಟ್​ ಎಂದು ಕಾಮೆಂಟ್​ ಮಾಡಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Apr 20, 2019, 4:09 PM IST

ಬಾಲಿವುಡ್​ ನಟ ಹೃತಿಕ್​ ರೋಷನ್​ ಕಟ್ಟುಮಸ್ತಾದ ದೇಹ ಕಟ್ಟಿಕೊಂಡಿರುವರು. ಒಂದು ಕಾಲದಲ್ಲಿ ದೈಹಿಕ ಸಮಸ್ಯೆಯಿಂದ ನಡೆದಾಡಲು ಕಷ್ಟ ಪಡುತ್ತಿದ್ದ ಈ ನಟ, ಹಗಲಿರುಳು ವರ್ಕೌಟ್ ಮಾಡಿ ಸದೃಢ ಮೈಕಟ್ಟು ಸಂಪಾದಿಸಿ 'ಗ್ರೀಕ್​ ಆಫ್​ ಗಾಡ್'​ ಎಂದು ಫೇಮಸ್​ ಆದವರು.

ಈ ಸಿಕ್ಸ್​ ಫ್ಯಾಕ್​ ಕಿಂಗ್​ ನಟನೆ ಹಾಗೂ ಮೈ ಮಾಟಕ್ಕೆ ಮಾರುಹೋಗದವರೇ ಇಲ್ಲ. ಇದೀಗ ಈತ ದೇಹ ಹುರಿಗೊಳಿಸುತ್ತಿದ್ದ ವಿಡಿಯೋ ನೋಡಿ ಅವರ ಪತ್ನಿ ಸುಸೇನ್ ರೋಷನ್ ಹುಬ್ಬೇರಿಸಿದ್ದಾರೆ. 'ನೀವು 20 ವರ್ಷಗಳ ಹಿಂದಿಗಿಂತ ಈಗ ಸಖತ್​ ಹಾಟ್​ ಆಗಿ ಕಾಣುತ್ತಿದ್ದೀರಾ' ಎಂದು ಪ್ರೀತಿ ತುಂಬಿದ ತುಂಟ ಕಾಮೆಂಟ್ ಮಾಡಿದ್ದಾರೆ.

ಇನ್ನು ಹೃತಿಕ್, ಗಣಿತ ತಜ್ಞ ಬಿಹಾರದ ಆನಂದ್​ ಕುಮಾರ್​ ಅವರ ಬಯೋಪಿಕ್​ 'ಸೂಪರ್​ 30' ಚಿತ್ರದಲ್ಲಿ ಬ್ಯುಸಿಯಾಗದ್ದಾರೆ. ಈ ಪಾತ್ರಕ್ಕೆ ಮೈ ತೂಕ ಇಳಿಸಿಕೊಂಡು, ತೆಳ್ಳಗಾಗುತ್ತಿದ್ದಾರೆ. ಈ ಹಿನ್ನೆಲೆ ಚಿತ್ರೀಕರಣ ಮುಗಿದ ಬಳಿಕ ಪ್ರತಿ ದಿನ ವರ್ಕೌಟ್​ ಮಾಡುತ್ತಿದ್ದಾರೆ. ಇದೀಗ ಹೃತಿಕ್ ವರ್ಕೌಟ್ ತುಣುಕು ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.

For All Latest Updates

TAGGED:

ABOUT THE AUTHOR

...view details