ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಶನ್ ಸಬಾ ಆಜಾದ್ ಅವರನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪ್ರಶಂಸಿದ್ದಾರೆ. ಈ ಮೂಲಕ ಮತ್ತೆ ಹೃತಿಕ್ ಮತ್ತು ಸಬಾ ಆಜಾದ್ ಮತ್ತೆ ರಿಲೇಷನ್ ಶಿಪ್ ನಲ್ಲಿರುವ ವದಂತಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಭಾನುವಾರ, ಸಬಾ ಅವರು ಸತ್ಯಜಿತ್ ರೇ ಅವರ ಚಲನಚಿತ್ರ ಗೂಪಿ ಗೈನೆ ಬಾಘಾ ಬೈನ್‌ನ ಹಾಡು ಹಾಡುತ್ತಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇವರ ಗಾಯನಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಪ್ರಶಂಸೆ ವ್ಯಕ್ತಪಡಿಸಿದ್ದರು. ಜೊತೆಗೆ ಹೃತಿಕ್ ರೋಷನ್ ಅವರು ಸಬಾ ಅವರ ಗಾಯನವನ್ನು ನೀವು ಅಸಾಧಾರಣ ಪ್ರತಿಭೆ ಎಂದು ಪ್ರಶಂಸಿಸಿದ್ದು, ಪ್ರತಿಯಾಗಿ ಸಬಾ, ನೀವು ಅತ್ಯಂತ ಕರುಣಾಮಯಿ ಎಂದು ಪ್ರತಿಕ್ರಿಯಿಸಿದ್ದಾರೆ.