ಕರ್ನಾಟಕ

karnataka

ETV Bharat / sitara

ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಿದ ಬಾಲಿವುಡ್ ನಟರು - ಭಾರತ ಚೀನಾ ಬಿಕ್ಕಟ್ಟು

ದೇಶ ಇತ್ತೀಚೆಗೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಾಲಿವುಡ್ ಸ್ಟಾರ್​​​ಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್​​​​​​​​​​​​​​​, ಖ್ಯಾತನಾಮರ ಹಠಾತ್ ಸಾವು, ಭಾರತ-ಚೀನಾ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತ ಯೋಧರ ಬಲಿದಾನಕ್ಕೆ ಸಂಬಂಧಿಸಿದಂತೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

india china face off
ಬಾಲಿವುಡ್ ನಟರು

By

Published : Jun 17, 2020, 12:51 PM IST

ಭಾರತ-ಚೀನಾ ಗಡಿಯ ಗಾಲ್ವಾನ್‌ ವ್ಯಾಲಿಯಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ 20 ಮಂದಿ ಯೋಧರು ಹುತಾತ್ಮರಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೃತಿಕ್ ರೋಷನ್ ದು:ಖ ವ್ಯಕ್ತಪಡಿಸಿದ್ದಾರೆ. 'ಈ ಸುದ್ದಿಯನ್ನು ಕೇಳಿ ನನ್ನ ಹೃದಯ ಭಾರವಾಗಿದೆ. ದೇಶದಲ್ಲಿ ಗಡಿಯನ್ನು ಕಾಯುತ್ತಿರುವ ಹಾಗೂ ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮರಿಗೆ ನಾನು ಗೌರವ ಸಲ್ಲಿಸಲು ಬಯಸುತ್ತೇನೆ. ಅವರ ಕುಟುಂಬಕ್ಕೆ ದೇವರು ದು:ಖ ಭರಿಸುವ ಶಕ್ತಿ ನೀಡಲಿ. ಅಗಲಿದ ಹುತಾತ್ಮರ ಆತ್ಮಕ್ಕೆ ಶಾಂತಿ ದೊರೆಯಲಿ' ಎಂದು ಪ್ರಾರ್ಥಿಸುವುದಾಗಿ ಹೃತಿಕ್ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ಕೂಡಾ 'ಭಾರತೀಯ ಸೇನೆಗೆ ಜಯವಾಗಲಿ, ಜೈ ಹಿಂದ್ ಎಂದು ಟ್ವೀಟ್ ಮಾಡುವ ಮೂಲಕ ಭಾರತೀಯ ಸೇನೆಗೆ ಬೆಂಬಲ ನೀಡಿದ್ದಾರೆ. ಗಾಲ್ವಾನ್ ವ್ಯಾಲಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನಗಳು, ಈ ಯೋಧರ ಅಮೂಲ್ಯವಾದ ಸೇವೆಯನ್ನು ನಾವು ಸ್ಮರಸಬೇಕಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಯೋಧರು ಹಾಗೂ ಅವರ ಕುಟುಂಬಕ್ಕೆ ನನ್ನ ಸಂತಾಪ ಸೂಚಿಸಲು ಬಯಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಘಟನೆಯಿಂದ ಬಹಳ ಬೇಸರಗೊಂಡಿರುವ ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ, 'ಗಾಲ್ವಾನ್ ವ್ಯಾಲಿಯಲ್ಲಿ ನಮ್ಮ ವೀರಯೋಧರನ್ನು ಕಳೆದುಕೊಂಡು ತೀವ್ರ ದು:ಖಿತರಾಗಿದ್ದೇವೆ. ನಮ್ಮ ದೇಶಕ್ಕೆ ಅವರು ಮಾಡಿರುವ ಅಮೂಲ್ಯ ಸೇವೆಗಾಗಿ ಅವರಿಗೆ ಎಂದೆಂದಿಗೂ ಋಣಿಯಾಗಿರಲು ಬಯಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಹಿರಿಯ ನಟ ಅಮಿತಾಬ್ ಬಚ್ಚನ್ ಕೂಡಾ ಟ್ವೀಟ್ ಮಾಡಿ 'ನಮ್ಮ ದೇಶವನ್ನು ರಕ್ಷಿಸುವ ಉದ್ಧೇಶದಿಂದ, ಪ್ರಜೆಗಳ ಯೋಗಕ್ಷೇಮದ ದೃಷ್ಟಿಯಿಂದ ಸೈನಿಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಭಾರತೀಯ ಸೇನಾ ಅಧಿಕಾರಿಗಳು ಹಾಗೂ ಸೈನಿಕರಿಗೆ ಸೆಲ್ಯೂಟ್' ಎಂದು ಬರೆದುಕೊಂಡಿದ್ದಾರೆ.

ಗೋಲ್​ಮಾಲ್ ನಟ ತುಷಾರ್ ಕಪೂರ್ ಟ್ವೀಟ್ ಮಾಡಿ 'ಗಡಿಯಲ್ಲಿ ದೇಶವನ್ನು ರಕ್ಷಿಸುತ್ತಿರುವ ಸೈನಿಕರಿಗೆ ಇನ್ನೂ ಹೆಚ್ಚಿನ ಶಕ್ತಿ ಸಿಗಲಿ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ದೊರೆಯಲಿ' ಎಂದು ಪ್ರಾರ್ಥಿಸಿದ್ದಾರೆ.

ಭಾರತ -ಚೀನಾ ಗಡಿಯ ಗಾಲ್ವಾನ್‌ ವ್ಯಾಲಿಯಲ್ಲಿ ಸೋಮವಾರ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ಗುಂಡಿನ ದಾಳಿ ಮಾಡಿದ್ದರಿಂದ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು 17 ಕ್ಕೂ ಹೆಚ್ಚು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೆ ಭಾರತೀಯ ಸೈನಿಕರು ಕೂಡಾ ಉತ್ತರ ನೀಡಿದ್ದು ಚೀನಾದ 43 ಸೈನಿಕರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ABOUT THE AUTHOR

...view details