ಹೈದರಾಬಾದ್ (ತೆಲಂಗಾಣ): ಕ್ರಿಕೆಟ್ ದಂತಕಥೆ ಹಾಗೂ ಟೀಂ ಇಂಡಿಯಾದ ಮಾಜಿ ಆಟಗಾರ ಕಪಿಲ್ ದೇವ್ ಅವರ ಜೀವನಾಧಾರಿತ 83 ಚಿತ್ರ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಪಿಲ್ ದೇವ್ ಮಾಡಿದ ಸಾಧನೆಯನ್ನು ಪರದೆ ಮೇಲೆ ನಿರ್ದೇಶಕ ಕಬೀರ್ ಖಾನ್ ಅಚ್ಚುಕಟ್ಟಾಗಿ ತೋರಿಸಿದ್ದಾರೆ.
ಇನ್ನು ಕಪಿಲ್ದೇವ್ ಅವರ ಪಾತ್ರಕ್ಕೆ ಜೀವ ತುಂಬಿದ ನಟ ರಣವೀರ್ ಸಿಂಗ್ ಅವರನ್ನು ಇಡೀ ಬಾಲಿವುಡ್ ಬಳಗ ಇದೀಗ ಪ್ರಶಂಸಿಸುತ್ತಿದೆ. ಆದರೆ, ಈ ನಡುವೆ ಸಣ್ಣ ಪ್ರಮಾದವೊಂದು ನಡೆದಿದ್ದು ಚಿತ್ರದ ಬಗ್ಗೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
83 ಚಿತ್ರತಂಡದ ಜೊತೆಗೆ ನಿನ್ನೆ ರಾತ್ರಿ ಮುಂಬೈನಲ್ಲಿ ಪ್ರೀಮಿಯರ್ ಶೋ ವೀಕ್ಷಣೆ ಮಾಡಿದ ಬಾಲಿವುಡ್ನ ನಟ - ನಟಿಯರು ಸಾಮಾಜಿಕ ಜಾಲತಾಣದಲ್ಲಿ ರಣವೀರ್ ಸಿಂಗ್ ಹಾಗೂ ಕೆಲವೇ ದೃಶ್ಯಗಳಲ್ಲಿ ಮಿಂಚಿ ಮರೆಯಾಗುವ ದೀಪಿಕಾ ಪಡುಕೋಣೆ ಅವರ ಅದ್ಭುತ ನಟನೆಯನ್ನು ಕೊಂಡಾಡಿ ಬರೆದುಕೊಂಡಿದ್ದಾರೆ. ಆದರೆ, ರಣವೀರ್ ಸಿಂಗ್ ಅವರೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದ್ದ ಅರ್ಜುನ್ ಕಪೂರ್ ಮಾತ್ರ ಈ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ, ಏಕೆ ಅನ್ನೋದು ಇದೀಗ ಚರ್ಚೆಯ ವಿಷಯವಾಗಿದೆ.
ಇದಕ್ಕೆ ಕಾರಣ ಏನಿರಬಹುದು?
83 ಸಿನಿಮಾದಲ್ಲಿ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಯಾರೆಂದು ಕೆಲವರಿಗೆ ಗೊತ್ತಿರಬಹುದು. ಆದರೆ, ಹಲವರಿಗೆ ಈ ಬಗ್ಗೆ ಗೊತ್ತಿರಲಿಕ್ಕಿಲ್ಲ. ಇದೇ ವಿಷಯ ಇದೀಗ ಜಾಲತಾಣದಲ್ಲಿ ಚರ್ಚೆ ಗ್ರಾಸವಾಗುತ್ತಿದ್ದು, ಕೆಲವರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಚಿತ್ರದಲ್ಲಿ ರೋಮಿ ದೇವ್ ಆಗಿ ಕಾಣಿಸಿಕೊಂಡಿರುವ ನಟ ರಣವೀರ್ ಸಿಂಗ್ ಅವರ ಬದಲಾಗಿ ಅರ್ಜುನ್ ಕಪೂರ್ ಅವರನ್ನೇ ನಾಯಕ ನಟನನ್ನಾಗಿ ಮಾಡಬೇಕಿತ್ತು ಎಂಬಿತ್ಯಾತಿ ಅಭಿಪ್ರಾಯವನ್ನು ಇಟ್ಟಿದ್ದಾರೆ. ಈ ವಿಷಯ ಇದೀಗ ಮುನ್ನೆಲೆಗೆ ಬರಲು ಬಲವಾದ ಕಾರಣವೂ ಇದೆ.