ಮುಂಬೈ (ಮಹಾರಾಷ್ಟ್ರ):ಹಿಂದಿ ಬಿಗ್ ಬಾಸ್ 15ರ ಹಿಂದಿನ ಸಂಚಿಕೆಯಲ್ಲಿ, ತೇಜಸ್ವಿ ಪ್ರಕಾಶ್ ಅವರನ್ನು ಮದುವೆಯಾಗುವಂತೆ ಕರಣ್ ಕುಂದ್ರಾ ಅವರಿಗೆ ಪ್ರತಿಸ್ಪರ್ಧಿ ರಾಖಿ ಸಾವಂತ್ ಮಾರ್ಗದರ್ಶನ ನೀಡಿದ್ದರು. ಆದರೆ, ಟಾಸ್ಕ್ವೊಂದರ ವೇಳೆ ವೈಯಕ್ತಿಕ ಆಟಗಳು ಅವರ ಮಧ್ಯೆ ಬಿರುಕು ಮೂಡಿಸಿವೆ.
ತೇಜಸ್ವಿ ತನ್ನತ್ತ ಗಮನ ಹರಿಸುತ್ತಿಲ್ಲ ಎಂದು ಕರಣ್ ಭಾವಿಸಿದ್ದು, ತೇಜಸ್ವಿ ಅವರನ್ನು ದೂರ ಹೋಗುವಂತೆ ಕೇಳಿಕೊಂಡರು. ತೇಜಸ್ವಿ ಅವರು ಕರಣ್ ಜೊತೆ ಮಾತನಾಡಲು ಬಂದಾಗ, ಅವರು ತೇಜಸ್ವಿಗೆ ನಿಮ್ಮ ಸ್ನೇಹಿತರಾದ ನಿಶಾಂತ್ ಭಟ್ ಮತ್ತು ದೇವೋಲೀನಾ ಭಟ್ಟಾಚಾರ್ಯರ ಬಳಿಗೆ ಹೋಗಬಹುದು. ನಮ್ಮಲ್ಲಿ ಚರ್ಚಿಸಲು ಏನೂ ಇಲ್ಲ ಎಂದು ನಾನು ಭಾವಿಸುತ್ತೇನೆ. ನೀವ್ಯಾಕೆ ಇಲ್ಲಿದ್ದೀರಿ? ಎಂದು ಕರಣ್ ಹೇಳಿದರು. ಅದೇಗೆ ಈ ರೀತಿ ಮಾತನಾಡುತ್ತಾರೆ ಎಂದು ತೇಜಸ್ವಿ ಪ್ರತಿಕ್ರಿಯಿಸಿದರು. ಅಲ್ಲದೇ ನೀವು ನನ್ನನ್ನು ಇಲ್ಲಿಂದ ಹೋಗುವಂತೆ ಹೇಳಲು ಎಷ್ಟು ಧೈರ್ಯ ಎಂದು ಪ್ರಶ್ನಿಸಿದರು.