ಕರ್ನಾಟಕ

karnataka

ETV Bharat / sitara

ಬಿಗ್ ​​ಬಾಸ್​​ ಶೋನಿಂದ ಉಮರ್ ರಿಯಾಜ್ ಎಲಿಮಿನೇಟ್​: ಹಿಮಾಂಶಿ ಖುರಾನಾ ಅಸಮಾಧಾನ - ಹಿಮಾಂಶಿ ಖುರಾನಾ ಲೇಟೆಸ್ಟ್​​ ನ್ಯೂಸ್​​

ಉಮರ್ ರಿಯಾಜ್ ಎಲಿಮಿನೇಟ್​ ಆಗಿರುವುದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶೋ ಮೇಕರ್ಸ್​ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಉಮರ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.

Himanshi Khurana talks about Umar Riaz eviction
ಹಿಮಾಂಶಿ ಖುರಾನಾ

By

Published : Jan 28, 2022, 11:02 AM IST

ಹಿಂದಿ ಬಿಗ್​​ಬಾಸ್​​ ಶೋನಿಂದ ಸ್ಪರ್ಧಿ ಉಮರ್ ರಿಯಾಜ್ ಎಲಿಮಿನೇಟ್​ ಆಗಿದ್ದಾರೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ತಲುಪಲಿರುವ ಈ ಸಮಯದಲ್ಲಿ ಉಮರ್ ರಿಯಾಜ್ ಅವರನ್ನು ಶೋನಿಂದ ಎಲಿಮಿನೇಟ್​ ಮಾಡಲಾಗಿದೆ. ಈ ಬಗ್ಗೆ 'ಬಿಗ್ ಬಾಸ್ 13' ಮಾಜಿ ಸ್ಪರ್ಧಿ ಹಿಮಾಂಶಿ ಖುರಾನಾ ಮತ್ತು 'ಬಿಗ್ ಬಾಸ್ 15' ಮಾಜಿ ಸ್ಪರ್ಧಿ ರಾಜೀವ್ ಅದಾತಿಯಾ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು.

ಹಿಮಾಂಶಿ ಖುರಾನಾ ಹಾಗೂ ರಾಜೀವ್ ಅದಾತಿಯಾ ಪ್ರತಿಕ್ರಿಯೆ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಉಮರ್ ರಿಯಾಜ್ ಎಲಿಮಿನೇಟ್​ ಆಗಿರುವುದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶೋ ಮೇಕರ್ಸ್​ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಉಮರ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಜತೆಗೆ ಹಿಮಾಂಶಿ ಖುರಾನಾ ಕೂಡ ಕಾರ್ಯಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಸೀಸನ್​​ನಲ್ಲೂ ಹೀಗೆ ಆಗುತ್ತದೆ ಎಂದು ಕಿಡಿಕಾರಿದ್ದಾರೆ.

ಅಭಿಮಾನಿಗಳು ಮತ್ತು ಇತರ ಸದಸ್ಯರು ಕೂಡ ಉಮರ್ ರಿಯಾಜ್​​ ಅವರನ್ನು ಬೆಂಬಲಿಸಿದ್ದಾರೆ. ಶೋ ಮೇಕರ್​ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ 'ನೋ ಉಮರ್​ ರಿಯಾಜ್​​ ನೋ ಬಿಗ್​ಬಾಸ್​ 15' ಎಂಬುವುದು ಟ್ವಿಟರ್​ನಲ್ಲಿ ಟ್ರೆಂಡಿಂಗ್​​ ಆಗಿದೆ.

ಇದನ್ನೂ ಓದಿ:ಹಿಂದಿ ಬಿಗ್ ಬಾಸ್ 15ರಿಂದ ಉಮರ್ ರಿಯಾಜ್ ಎಲಿಮಿನೇಟ್​.. ಅಭಿಮಾನಿಗಳ ಅಸಮಾಧಾನ..

ABOUT THE AUTHOR

...view details