ಮುಂಬೈ:ನಟ ಅಪರಶಕ್ತಿ ಖುರಾನಾಗೆ ಉತ್ತಮ ಹಾಸ್ಯ ಪ್ರಜ್ಞೆ ಇದೆ. ಅವರ ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್ ಇದಕ್ಕೆ ಸಾಕ್ಷಿ.
'ಹೆಲ್ಮೆಟ್' ಚಿತ್ರದಲ್ಲಿ ಪ್ರಣುತನ್ ಜೊತೆಗೆ ನಾಯಕನಾಗಿ ಕಾಣಿಸಿಕೊಳ್ಳಲಿರುವ ಅಪರಶಕ್ತಿ ಈ ಚಿತ್ರದ ಸ್ಟಿಲ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರದ ರೊಮ್ಯಾನ್ಸ್ ದೃಶ್ಯದ ಚಿತ್ರೀಕರಣದ ಫೋಟೋ ಹಂಚಿಕೊಂಡಿರುವ ಅಪರಶಕ್ತಿ, ಒಂದು ಸಾಮಾನ್ಯ ಫೋಟೋ ಹಾಗೂ ಇನ್ನೊಂದು ಫೋಟೋವನ್ನು ಎಡಿಟ್ ಮಾಡಿ ಇಬ್ಬರ ಮುಖಕ್ಕೂ ಫೇಸ್ ಶೀಲ್ಡ್ ಹಾಕಿರುವಂತೆ ಹಂಚಿಕೊಂಡಿದ್ದಾರೆ.
"ಸಾಂಕ್ರಾಮಿಕ ಪೂರ್ವದ ಅವಧಿಯಲ್ಲಿ ಹೆಲ್ಮೆಟ್ ಚಿತ್ರವನ್ನು ಚಿತ್ರೀಕರಿಸಿದ್ದು ಒಳ್ಳೆಯದು! ಇಲ್ಲದಿದ್ದರೆ, ಇಂದಿನ ಕಾಲದಲ್ಲಿ, ಅಂತಹ ದೃಶ್ಯಗಳನ್ನು ಚಿತ್ರೀಕರಿಸಲು ನಮಗೆ 'ರಕ್ಷಣೆ' ಬೇಕಾಗುತ್ತದೆ" ಎಂದು ಅಪರಶಕ್ತಿ ಗೇಲಿ ಮಾಡಿದ್ದಾರೆ.