ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಕುರಿತು ಕರ್ನಾಟಕದಲ್ಲಿ ಭುಗಿಲೆದ್ದಿರುವ ವಿವಾದದ ಕುರಿತು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿಕೆ ಸಂಬಂಧ ಹಿಂದಿ ಚಿತ್ರರಂಗದ ಹಿರಿಯ ನಟಿ ಶಬಾನಾ ಅಜ್ಮಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಜ್ಞಾನಿ ಮತ್ತು ಲೇಖಕ ಆನಂದ್ ರಂಗನಾಥನ್ ಅವರ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಕಂಗನಾ, "ನೀವು ಧೈರ್ಯವನ್ನು ತೋರಿಸಲು ಬಯಸಿದರೆ, "ಆಫ್ಘಾನಿಸ್ತಾನದಲ್ಲಿ ಬುರ್ಖಾ ಧರಿಸದೆ ಧೈರ್ಯವನ್ನು ಪ್ರದರ್ಶಿಸಿ. ನಿಮ್ಮನ್ನು ಬಂಧಿಯಾಗಿಟ್ಟುಕೊಳ್ಳದೆ ಬಿಡಿಸಿಕೊಳ್ಳಲು ಕಲಿಯಿರಿ" ಎಂದು ಬರೆದುಕೊಂಡಿದ್ದರು.