ಕರ್ನಾಟಕ

karnataka

ETV Bharat / sitara

ಟೈಗರ್​-3ನಲ್ಲಿ ಮತ್ತೆ ತೆರೆ ಮೇಲೆ ಸಲ್ಲೂ - ಕ್ಯಾಟ್​ ರೊಮ್ಯಾನ್ಸ್​ - ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್

ಸದ್ಯ ಅಂತಿಮ್ ಸಿನಿಮಾದ ಶೂಟ್‌ನಲ್ಲಿ ಸಲ್ಮಾನ್ ಬ್ಯುಸಿಯಾಗಿದ್ದು, ಆ ನಡುವೆಯೇ ಕಿಕ್​ 2 ಅನ್ನು ಕೂಡಾ ಘೋಷಿಸಿದ್ದಾರೆ. ಆ ಬಳಿಕ ಕಭಿ ಈದ್ ಕಭಿ ದೀಪಾವಳಿ ಕೂಡಾ ರಿಲೀಸ್​ಗೆ ಸಾಲುಗಟ್ಟಿ ನಿಂತಿದೆ.

Salman-Katrina
Salman-Katrina

By

Published : Dec 22, 2020, 11:02 PM IST

ಹೈದರಾಬಾದ್: ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಸೂಪರ್​ಹಿಟ್ ಟೈಗರ್ ಫ್ರ್ಯಾಂಚೈಸ್‌ನಿಂದ ಮತ್ತೊಂದು ಸಿನಿಮಾದೊಂದಿಗೆ ಸಜ್ಜಾಗಿದ್ದಾರೆ. ಇದೇ ಮುಂಬರುವ ಮಾರ್ಚ್​ನಿಂದ ಟೈಗರ್-3 ಪ್ರಾರಂಭವಾಗಲಿದ್ದಾರೆ.

ವಿಶೇಷ ಫೋಟೋ ಶೇರ್ ಮಾಡಿ ಕತ್ರೀನಾಗೆ ಬರ್ತಡೇ ವಿಶ್ ಮಾಡಿದ ಸಲ್ಮಾನ್ ಖಾನ್ ಟೈಗರ್-3 ಸಿನಿಮಾಗಾಗಿ ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಟೈಗರ್ ಸರಣಿಯ ಮೂರನೇ ಸರಣಿಗೂ ಯಶ್ ರಾಜ್ ಬ್ಯಾನರ್ ಬಂಡವಾಳ ಹೂಡುತ್ತಿದೆ. ಟೈಗರ್ ಮೊದಲೆರಡು ಸರಣಿಯನ್ನು ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಏಕ್ತಾ ಟೈಗರ್ ಕಬೀರ್ ಖಾನ್ ಸಾರಥ್ಯದಲ್ಲಿ ಮೂಡಿ ಬಂದಿತ್ತು. ಆ ನಂತರ ಬಂದ ಟೈಗರ್ ಜಿಂದಾ ಹೈ ಗೆ ಅಲಿ ಅಬ್ಬಾಸ್ ಜಫರ್ ಆ್ಯಕ್ಷನ್ ಕಟ್ ಹೇಳಿದ್ದರು.

ಸಲ್ಮಾನ್ ಜೊತೆ ಕತ್ರೀನಾ

ಸದ್ಯ ಅಂತಿಮ್ ಸಿನಿಮಾದ ಶೂಟ್‌ನಲ್ಲಿ ಸಲ್ಮಾನ್ ಬ್ಯುಸಿಯಾಗಿದ್ದು, ಆ ನಡುವೆನೇ ಕಿಕ್​ 2 ಅನ್ನು ಕೂಡಾ ಘೋಷಿಸಿದ್ದಾರೆ. ಆ ಬಳಿಕ ಕಭಿ ಈದ್ ಕಭಿ ದೀಪಾವಳಿ ಕೂಡಾ ರಿಲೀಸ್​ಗೆ ಸಾಲುಗಟ್ಟಿ ನಿಂತಿದೆ.

ಇದೀಗ ಟೈಗರ್ ಮೂರನೇ ಸರಣಿಗೆ ಮನೀಶ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಮೂರನೇ ಸರಣಿ ಹೇಗಿರಲಿದೆ ಎನ್ನುವ ಕುತೂಹಲ ಸಲ್ಮಾನ್ ಅಭಿಮಾನಿಗಳಲ್ಲಿ ಮೂಡಿದೆ. ನಿರ್ದೇಶಕರು ಬದಲಾದರೂ ನಾಯಕಿ ಮಾತ್ರ ಬದಲಾಗಲಿಲ್ಲ. ಟೈಗರ್ ಮೂರನೇ ಸರಣಿಯಲ್ಲಿಯೂ ಕತ್ರೀನಾ ಸಲ್ಮಾನ್ ಜೊತೆ ರೊಮ್ಯಾನ್ಸ್ ಮಾಡಲು ಸಿದ್ಧರಾಗಿದ್ದಾರೆ. ಈ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ABOUT THE AUTHOR

...view details