ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಜೀವನದ ಅಪ್ಡೇಟ್ಗಳನ್ನೇ ಹಂಚಿಕೊಳ್ಳುತ್ತಾ ಸದಾ ಸುದ್ದಿಯಾಗುವ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು, ಇದೀಗ ಕೊರೊನಾ 2ನೇ ಅಲೆಯ ಸಮಯದಲ್ಲಿ ತಮ್ಮ ಫಿಟ್ನೆಸ್ ಬಗೆಗಿನ ರಹಸ್ಯದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಚಲನಚಿತ್ರ ನಟಿಯರು ತಮ್ಮ ಫಿಟ್ನೆಸ್ ಹಾಗೂ ದೇಹ ಸೌಂದರ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಅದೇ ರೀತಿ 53 ವರ್ಷಕ್ಕೆ ಕಾಲಿಟ್ಟಿರುವ ನಟಿ ಮಾಧುರಿ ದೀಕ್ಷಿತ್ ಇಂದಿಗೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದು, ಇದಕ್ಕಾಗಿ ನಿತ್ಯವೂ ಯೋಗಾಸನ ಮಾಡುತ್ತಾರಂತೆ.