ಬಾಲಿವುಡ್ ಜೋಡಿಗಳಾದ ಆಯುಷ್ಮಾನ್ ಖುರಾನಾ ಹಾಗೂ ತಹಿರಾ ಕಶ್ಯಪ್ ಪುತ್ರಿ ವರುಷ್ಕಾಗೆ ನಿನ್ನೆ 6 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ಸೆಲಬ್ರಿಟಿಗಳು ಎಂದರೆ ಕೇಳಬೇಕೇ, ಮಕ್ಕಳ ಹುಟ್ಟುಹಬ್ಬವನ್ನು ಎಷ್ಟು ವಿಜೃಂಭಣೆಯಿಂದ ಮಾಡಬೇಕು ಎಂದು ಪ್ಲ್ಯಾನ್ ಮಾಡಿರುತ್ತಾರೆ. ಆದರೆ ಈ ಕೊರೊನಾ ಲಾಕ್ಡೌನ್ನಿಂದಾಗಿ ಅದು ಸಾಧ್ಯವಿಲ್ಲ. ಆದ್ದರಿಂದ ಸರಳವಾಗಿ ಮಗಳ ಬರ್ತಡೇ ಆಚರಿಸಿದ್ದಾರೆ.
ಲಾಕ್ಡೌನ್ನಲ್ಲೂ ಹಿಂದೆಂದೂ ಮಾಡಿರದ ರೀತಿ ಮಗಳ ಬರ್ತಡೇ ಆಚರಿಸಿದ ಆಯುಷ್ಮಾನ್ ಖುರಾನ...! - Tahira Kashyap latest news
ಬಾಲಿವಡ್ ನಟ ಆಯುಷ್ಮಾನ್ ಖುರಾನ ಮಗಳ 6ನೇ ವರ್ಷದ ಹುಟ್ಟುಹಬ್ಬವನ್ನು ಲಾಕ್ಡೌನ್ ನಡುವೆಯೂ ಹಿಂದೆಂದೂ ಮಾಡಿರದಂತ ರೀತಿಯಲ್ಲಿ ಆಚರಿಸಿದ್ದಾರೆ.
ಆಯುಷ್ಮಾನ್ ಹಾಗೂ ತಹಿರಾ ಇಬ್ಬರೇ ಸೇರಿ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ಬರ್ತಡೇ ಬ್ಯಾನರ್ ಹಾಗೂ ಇನ್ನಿತರ ಡೆಕೊರೇಷನ್ ಮಾಡಿದ್ದಾರೆ. 'ಕಳೆದ 10 ದಿನಗಳಿಂದ ಬರ್ತಡೇಗೆ ತಯಾರಿ ಮಾಡುತ್ತಿದ್ದೇವೆ. ಆದರೆ ಮಾರ್ಕೆಟ್ನಲ್ಲಿ ಬಲೂನ್ ಆಗಲಿ ಇತರ ಯಾವುದೇ ಅಲಂಕಾರಿಕ ವಸ್ತುಗಳಾಗಲೀ ದೊರೆಯಲಿಲ್ಲ. ಆದ್ದರಿಂದ ಮನೆಯಲ್ಲೇ ದೊರೆಯವ ವಸ್ತುಗಳಿಂದ ಹೇಗೆ ಡೆಕೊರೇಷನ್ ಮಾಡಬಹುದು ಎಂದು ಪ್ಲ್ಯಾನ್ ಮಾಡಿ ಅದರಂತೆ ಎಲ್ಲಾ ರೆಡಿ ಮಾಡಿದ್ದೇವೆ. ನ್ಯೂಸ್ ಪೇಪರ್ ಹಾಗೂ ಪೇಯ್ಟಿಂಗ್ ಪೇಪರ್ಗಳನ್ನು ಬರ್ತಡೇ ಡೆಕೋರೇಷನ್ಗೆ ಬಳಸಿದ್ದು ಬಹಳ ಖುಷಿ ತಂದಿದೆ . ನಾನು ಕೇಕ್ ಮಾಡುತ್ತಿದ್ದರೆ, ಪತಿ ಆಯುಷ್ಮಾನ್ ಮಕ್ಕಳಿಗಾಗಿ ಟ್ರೆಷರ್ ಹಂಟ್ ಆಟದ ವ್ಯವಸ್ಥೆ ಮಾಡಿದ್ದರು. ಅಲ್ಲದೆ ನಮಗೆ ಬೇಸರವಾಗಬಾರದು ಎಂಬ ಉದ್ದೇಶದಿಂದ ಹಾಡು ಹೇಳುತ್ತಾ ನಮಗೆ ಮನರಂಜನೆ ನೀಡುತ್ತಿದ್ದರು. ಮಗಳ ಕ್ಲಾಸ್ಮೆಟ್ಸ್ ಹಾಗೂ ನಮ್ಮ ಸಂಬಂಧಿಕರು ಬರ್ತಡೇ ವಿಶ್ ಮಾಡುವ ವಿಡಿಯೋ ಕೂಡಾ ಕಲೆಕ್ಟ್ ಮಾಡಿದ್ದೆವು. ಇದು ನಿಜಕ್ಕೂ ಬಹಳ ಸ್ಪೆಷಲ್ ಬರ್ತಡೇ ಎಂದು ತಹಿರಾ ಬರೆದುಕೊಂಡಿದ್ದಾರೆ. ಆಯುಷ್ಮಾನ್ ಖುರಾನ ಹಾಗೂ ತಹಿರ 2008 ರಲ್ಲಿ ಮದುವೆಯಾಗಿದ್ದರು. ದಂಪತಿಗೆ ವಿರಾಜ್ವೀರ್ ಎಂಬ ಮಗ ಕೂಡಾ ಇದ್ದಾನೆ.