ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟಿ ಕಂಗನಾ ರನೌತ್ ಅವರ ಮುಂಬೈ ಕಚೇರಿ ನೆಲಸಮಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಪಾಲಿಹಿಲ್ ರಸ್ತೆಯಲ್ಲಿನ ಕಚೇರಿಯನ್ನು ಜೆಸಿಬಿ ಮೂಲಕ ತೆರವಿಗೆ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಕಂಗನಾ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಚೇರಿ ನೆಲಸಮ ಮಾಡದಂತೆ ತಡೆ ನೀಡಿ ನಾಳೆ ಅಪರಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿದೆ. ಬಿಎಂಸಿ ಕೂಡ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲಿದೆ.
ಮುಂಬೈ ಮಹಾನಗರ ಪಾಲಿಕೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕಂಗನಾ ಕಚೇರಿ ತೆರವಿಗೆ ಇಂದು ಅಧಿಕಾರಿಗಳು ಮುಂದಾಗಿದ್ದರು. ಇದು ಭಾರೀ ವಿವಾದಕ್ಕೂ ಕಾರಣವಾಗಿದೆ.