ಬಾಲಿವುಡ್ ನಟಿ ತಬು ಇಂದು ತಮ್ಮ 50 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 'ಬಜಾರ್' ಚಿತ್ರದ ಮೂಲಕ ಬಾಲಿವುಡ್ ಕರಿಯರ್ ಆರಂಭಿಸಿದ ತಬು ಹಿಂದಿ ಮಾತ್ರವಲ್ಲ ತಮಿಳು, ತೆಲುಗು ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ.
ತಬು ಪೂರ್ತಿ ಹೆಸರು ತಬ್ಸುಮ್ ಫಾತಿಮಾ ಹಶ್ಮಿ. ಮೂಲತ: ಮುಸ್ಲಿಂ ಸಮುದಾಯಕ್ಕೆ ಸೇರಿದ ತಬು ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಬಾಲಿವುಡ್ ಹಿರಿಯ ನಟಿ ಶಬನಾ ಅಜ್ಮಿ ಹಾಗೂ ತಬು ಸಂಬಂಧಿಗಳು. ತಬು ಬಾಲ್ಯದಲ್ಲಿ ಇರುವಾಗಲೇ ಅವರ ತಂದೆ ತಾಯಿ ವಿಚ್ಛೇದನ ಪಡೆದು ದೂರವಾದರು. ತಾಯಿ ಹಾಗೂ ಅಜ್ಜಿ ಜೊತೆಯಲ್ಲಿ ಬೆಳೆದ ತಬು ತೆಲುಗು, ಹಿಂದಿ, ಇಂಗ್ಲಿಷ್, ಬೆಂಗಾಳಿ, ಮರಾಠಿ, ತಮಿಳು, ಮಲಯಾಳಂ, ಸ್ಪ್ಯಾನಿಷ್ ಹಾಗೂ ಫ್ರೆಂಚ್ ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಾರೆ.
1982 ರಲ್ಲಿ ಬಿಡುಗಡೆಯಾದ 'ಬಜಾರ್' ಚಿತ್ರದ ಮೂಲಕ ಬಾಲಿವುಡ್ನಲ್ಲಿ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದ ತಬು ಕೂಲಿ ನಂ 1, ಪೆಹಲಾ ಪೆಹಲಾ ಪ್ಯಾರ್, ಪ್ರೇಮ್, ಸಿಸಿಂದ್ರಿ, ಹಿಮ್ಮತ್, ಕಾದಲ್ ದೇಶಂ, ಕಾಲಾ ಪಾನಿ, ಬೀವಿ ನಂ 1, ಕವರ್ ಸ್ಟೋರಿ, ಸಾಥಿಯಾ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು ಭಾಷೆಗಳಲ್ಲಿ ಕೂಡಾ ನಟಿಸಿರುವ ತಬು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ಅಲಾ ವೈಕುಂಠಪುರಮುಲೋ' ತೆಲುಗು ಚಿತ್ರದಲ್ಲಿ ಅಲ್ಲು ಅರ್ಜುನ್ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ತಬು ತಬು ಹುಟ್ಟುಹಬ್ಬಕ್ಕೆ ಬಾಲಿವುಡ್ ಕೊರಿಯೋಗ್ರಾಫರ್ ಫರ್ಹಾ ಖಾನ್ ಹಾಗೂ ಇನ್ನಿತರರು ಶುಭ ಕೋರಿದ್ದಾರೆ. ಅಭಿಮಾನಿಗಳು ಕೂಡಾ ಸೋಷಿಯಲ್ ಮೀಡಿಯಾ ಮೂಲಕ ಮೆಚ್ಚಿನ ನಟಿಗೆ 50 ನೇ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಎವರ್ ಗ್ರೀನ್ ಹೀರೋ ದೇವಾನಂದ್ ಜೊತೆ ತಬು