ಕರ್ನಾಟಕ

karnataka

ETV Bharat / sitara

34ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಕಂಗನಾ ರಣಾವತ್ - Thalaivi trailer released

34ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕಂಗನಾಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ಕಂಗನಾ ಹುಟ್ಟುಹಬ್ಬದ ವಿಶೇಷವಾಗಿ ಇಂದು 'ತಲೈವಿ' ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗುತ್ತಿದೆ.

HBD Kangana
ಕಂಗನಾ ರಣಾವತ್

By

Published : Mar 23, 2021, 10:53 AM IST

ರಾಷ್ಟ್ರಪ್ರಶಸ್ತಿ ವಿಜೇತ ನಟಿ, ಪದ್ಮಶ್ರೀ ಪುರಸ್ಕೃತೆ ಕಂಗನಾ ರಣಾವತ್ ಇಂದು ತಮ್ಮ 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು, ಸಿನಿಗಣ್ಯರು, ಸ್ನೇಹಿತರು ಕಂಗನಾಗೆ ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ನಿನ್ನೆ ರಾತ್ರಿ ಕಂಗನಾ ತಮ್ಮ ಕುಟುಂಬದೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

34ನೇ ವಸಂತಕ್ಕೆ ಕಾಲಿಟ್ಟ ಕಂಗನಾ

ಇದನ್ನೂ ಓದಿ: ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ತ್ರಿಕೋನ ಚಿತ್ರ ಬಿಡುಗಡೆ

ಕಂಗನಾ ಹುಟ್ಟುಹಬ್ಬದ ಅಂಗವಾಗಿ ಇಂದು 'ತಲೈವಿ' ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡುತ್ತಿದೆ. 2006 ರಲ್ಲಿ 'ಗ್ಯಾಂಗ್​​ಸ್ಟರ್' ಚಿತ್ರದ ಮೂಲಕ ಬಾಲಿವುಡ್​​​ಗೆ ಬಂದ ಕಂಗನಾ ಮೊದಲ ಚಿತ್ರಕ್ಕೆ ಉತ್ತಮ ನಟಿ ಪ್ರಶಸ್ತಿ ಪಡೆದರು. ಧಾಮ್ ಧೂಮ್, ಫ್ಯಾಷನ್, ತನು ವೆಡ್ಸ್​ ಮನು, ಕ್ರಿಶ್, ಕ್ವೀನ್, ಮಣಿಕರ್ಣಿಕಾ, ಪಂಗಾ ಸೇರಿ ಇದುವರೆಗೂ ಅನೇಕ ಸಿನಿಮಾಗಳಲ್ಲಿ ಕಂಗನಾ ನಟಿಸಿದ್ದಾರೆ. 5 ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ ಕಂಗನಾಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಜಯಲಲಿತಾ ಬಯೋಪಿಕ್ 'ತಲೈವಿ' ಚಿತ್ರದಲ್ಲಿ ಕಂಗನಾ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದು ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸದ್ಯಕ್ಕೆ ಕಂಗನಾ 'ಧಾಕಡ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾತ್ರವಲ್ಲದೆ ಕಂಗನಾ ತಮ್ಮ ಖಡಕ್ ಮಾತುಗಳಿಂದ ಕೂಡಾ ಬಹಳ ಫೇಮಸ್. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ ವಇದರೊಂದಿಗೆ ವೃತ್ತಿ ಜೀವನದಲ್ಲಿ ಅನೇಕ ವಿವಾದಗಳನ್ನು ಕಂಗನಾ ಎದುರಿಸುತ್ತಲೇ ಬಂದಿದ್ದಾರೆ.

'ತಲೈವಿ' ಚಿತ್ರದಲ್ಲಿ ಕಂಗನಾ

ABOUT THE AUTHOR

...view details