ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ಕ್ಯೂಟ್ ಕಪಲ್ ಡೀಪ್‌ವೀರ್ ಸದ್ಯ ಹೊಸ ವರ್ಷದ ರಜೆಯಲ್ಲಿದ್ದು, ಪತ್ನಿ ದೀಪಿಕಾ ಪಡುಕೋಟೆ ಜೊತೆ ಡಿನ್ನರ್ ಮಾಡುತ್ತಿರುವ ವಿಡಿಯೋವನ್ನು ರಣವೀರ್ ಸಿಂಗ್ ಸಾಮಾಜಿಕ ಜಾಣತಾಣಗಳಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
Deepika and Ranveer Singh in Maldives: ಹ್ಯಾಪಿ ನ್ಯೂ ಇಯರ್ ಶೀರ್ಷಿಕೆಯಡಿ ಇನ್‌ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿದ್ದು, ಅದರಲ್ಲಿ ಹ್ಯಾವ್ ಯೂ ಫನ್ ಬೇಬಿ? ಎಂದು ರಣವೀರ್ ಸಿಂಗ್ ಪತ್ನಿ ದೀಪಿಕಾರನ್ನು ಕೇಳುತ್ತಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಕನ್ನಡದ ಬೆಡಗಿ, ಇತ್ತೀಚೆಗೆ ಬಿಡುಗಡೆಯಾಗಿದ್ದ 83 ಸಿನಿಮಾದ ಪ್ರೇರಿತ ಸಾಲುಗಳನ್ನು ಹೇಳಿದ್ದಾರೆ. ನಾವು ಆನಂದಿಸಲು ಬಂದಿದ್ದೇವೆ, ನಾವು ಬೇರೆ ಯಾವುದಕ್ಕಾಗಿ ಬಂದಿದ್ದೇವೆ ಎಂದು ಪ್ರಶ್ನಿಸಿದ್ದಾರೆ. ವಿಡಿಯೋ ಕ್ಲಿಪ್‌ನಲ್ಲಿ ದೀಪಿಕಾ ನೆಕ್ಲೆಸ್‌ನೊಂದಿಗೆ ಆಫ್-ಶೋಲ್ಡರ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದಾರೆ.