ಹೈದರಾಬಾದ್:ಬಾಲಿವುಡ್ ತಾರೆ ಅನಿಲ್ ಕಪೂರ್ ಪುತ್ರ ಹರ್ಷ್ ವರ್ಧನ್ ಕಪೂರ್ ಮತ್ತು ನಟಿ ಪೂಜಾ ಬೇಡಿ ಅವರ ಪುತ್ರಿ ಅಲಯಾ ಎಫ್ ಮುಂಬರುವ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ಸಜ್ಜಾಗಿದ್ದಾರೆ.
ಹರ್ಷ್ ವರ್ಧನ್ ಕಪೂರ್, ಅಲಯಾ ಎಫ್ ಮುಂಬರುವ ಚಿತ್ರ ಯಾವುದು ಗೊತ್ತೇ...? - ಬಾಲಿವುಡ್ ತಾರೆ ಅನಿಲ್ ಕಪೂರ್ ಪುತ್ರ ಹರ್ಷ್ ವರ್ಧನ್ ಕಪೂರ್
ಹರ್ಷ್ ವರ್ಧನ್ ಕಪೂರ್ ಮತ್ತು ಅಲಯಾ ಎಫ್ ಇನ್ನೂ ಹೆಸರಿಡದ ರೋಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಒಟ್ಟಾಗಿ ನಟಿಸಲಿದ್ದಾರೆ.
alaya
ಈ ಹಿಂದೆ ಸೋನಮ್ ಕಪೂರ್ ಅಭಿನಯದ ಈಶಾ, ಖೂಬ್ ಸುರತ್ ಮತ್ತು ವೀರೆ ದಿ ವೆಡ್ಡಿಂಗ್‌ನಂತಹ ಚಲನಚಿತ್ರಗಳನ್ನು ನಿರ್ಮಿಸಿರುವ ಹರ್ಷ್ ಅವರ ಸಹೋದರಿ ರಿಯಾ ಕಪೂರ್ ಅವರು ಇನ್ನೂ ಹೆಸರಿಸದ ಈ ಚಿತ್ರವನ್ನು ಕೂಡಾ ನಿರ್ಮಿಸಲಿದ್ದಾರೆ.
ವರದಿಗಳ ಪ್ರಕಾರ, ರಿಯಾ ವೀರೆ ದಿ ವೆಡ್ಡಿಂಗ್‌ನ ಮುಂದಿನ ಭಾಗ ಸೇರಿದಂತೆ ಕೆಲವು ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹರ್ಶ್ ಹಾಗೂ ಅಲಯಾ ಅಭಿನಯದ ಈ ಚಿತ್ರ ಪ್ರಿ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ. ಈ ಚಿತ್ರ ರೊಮ್ಯಾಂಟಿಕ್ ಕಾಮಿಡಿ ಆಗಿದ್ದು, ಹಾಸ್ಯದಿಂದ ತುಂಬಿರಲಿದೆ ಎಂದು ಹೇಳಲಾಗುತ್ತಿದೆ.