ಕರ್ನಾಟಕ

karnataka

ETV Bharat / sitara

ಪ್ರೀತಿಯ ಸಹೋದರನಿಗೆ ಹುಟ್ಟುಹಬ್ಬದ ಶುಭ ಕೋರಿದ ಸಾರಾ ಅಲಿ ಖಾನ್ - ಇಬ್ರಾಹಿಂ ಅಲಿಖಾನ್ ಹುಟ್ಟುಹಬ್ಬ

ಸೈಫ್​​​ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಇಂದು 20ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಸಾರಾ ಅಲಿಖಾನ್, ಕರೀನಾ ಕಪೂರ್ ಹಾಗೂ ಇನ್ನಿತರರು ಇಬ್ರಾಹಿಂಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

Ibrahim ali khan
ಇಬ್ರಾಹಿಂ ಅಲಿ ಖಾನ್

By

Published : Mar 5, 2021, 2:48 PM IST

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಹೋದರ ಇಬ್ರಾಹಿಂ ಅಲಿ ಖಾನ್ ಇಂದು 20ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಪ್ರೀತಿಯ ಸಹೋದರನಿಗೆ ಸಾರಾ ಅಲಿಖಾನ್ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಇಬ್ರಾಹಿಂ ಜೊತೆಗೆ ಇರುವ ಕೆಲವೊಂದು ಫೋಟೋ ಹಾಗೂ ವಿಡಿಯೋಗಳನ್ನು ಸಾರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಮನೀಷ್​ ಮಲ್ಹೋತ್ರಾ ನಿವಾಸದಲ್ಲಿ ಬಿಗ್​ ಪಾರ್ಟಿ: ಡಿಫರೆಂಟ್​ ಲುಕ್​ನಲ್ಲಿ ಗಮನ ಸೆಳೆದ ಕರಣ್​ ಜೋಹರ್​

"ಪ್ರೀತಿಯ ಇಗ್ಗಿ ಪಾಟರ್​​​ಗೆ ಜನ್ಮದಿನದ ಶುಭಾಶಯಗಳು. ನಾನು ಸದಾ ನಿನ್ನೊಂದಿಗೆ ಇರುತ್ತೇನೆ. ಬೀಚ್​​​ಗೆ ಹೋಗುವಾಗ ನನ್ನನ್ನು ಹಿಂಬಾಲಿಸುವಂತೆ ಮಾಡುತ್ತೇನೆ. ಪ್ರೀತಿಯಿಂದ ನಿನಗೆ ಊಟ ತಿನ್ನಿಸುತ್ತೇನೆ, ನಿನಗೆ ಯಾವಾಗಲೂ ಕಿರಿಕಿರಿಯಾಗುವಂತೆ ಮಾಡುತ್ತೇನೆ. ಮಗುವಂತೆ ಪೋಸ್ ನೀಡುವಂತೆ ಒತ್ತಾಯಿಸುತ್ತೇನೆ. ಈಜು ಸ್ಪರ್ಧೆಯಲ್ಲಿ ನಿನ್ನನ್ನು ಹಿಂದಿಕ್ಕುತ್ತೇನೆ. ಬ್ಯಾಡ್ಮಿಂಟನ್​​ನಲ್ಲಿ ನೀನು ಸೋಲುವಂತೆ ಮಾಡುತ್ತೇನೆ, ವರ್ಸ್ಟ್​​ ಗೂಗಲ್ ಮ್ಯಾಪ್ ಆಗಿ ಒಳ್ಳೆ ಜೋಕ್​​​​ಗಳನ್ನು ಹೇಳುತ್ತೇನೆ" ಎಂದು ಸಾರಾ ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೇಟಸ್​​​​ನಲ್ಲಿ ನೀಲಿ ಹಾಗೂ ಬಿಳಿ ಬಣ್ಣದ ಫುಟ್​​​​ಬಾಲ್ ಥೀಮ್ ಕೇಕ್​​​​​​​​​​​​ ಕಟ್ ಮಾಡುವ ಬೂಮರಿಂಗ್ ವಿಡಿಯೋವನ್ನು ಕೂಡಾ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ಕರೀನಾ ಕಪೂರ್ ಕೂಡಾ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್​​ನಲ್ಲಿ ಇಬ್ರಾಹಿಂ ಫೋಟೋ ಹಂಚಿಕೊಂಡು " ನೋಡಲು ಚೆನ್ನಾಗಿ ಕಾಣುತ್ತಿದ್ದೀಯ, ಹ್ಯಾಪಿ ಬರ್ತ್​ಡೇ ಹ್ಯಾಂಡ್​​​​ಸಮ್​​​​" ಎಂದು ಬರೆದುಕೊಂಡಿದ್ದಾರೆ.

ಇಬ್ರಾಹಿಂ ಬರ್ತ್​ಡೇ ಕೇಕ್
ಕರೀನಾ ಕಪೂರ್ ಇನ್ಸ್ಟಾಗ್ರಾಮ್ ಸ್ಟೇಟಸ್

ABOUT THE AUTHOR

...view details