ಮುಂಬೈ:ಬಾಲಿವುಡ್ ನಟ ರಣ್‌ವೀರ್ ಸಿಂಗ್ ತಮ್ಮ ತಾಯಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ತಂದೆ ಜಗ್‌ಜಿತ್ ಸಿಂಗ್ ಭವ್‌ನಾನಿ, ಪತ್ನಿ ದೀಪಿಕಾ ಪಡುಕೋಣೆ, ಮಾವ ಪ್ರಕಾಶ್ ಪಡುಕೋಣೆ, ಅತ್ತೆ ಉಜ್ಜಾಲ ಪಡುಕೋಣೆ ಜತೆ ಸೇರಿ ತಾಯಿಯ ಜನ್ಮದಿನವನ್ನು ಆಚರಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
'ಹ್ಯಾಪಿ ಬರ್ತಡೇ ಮಮ್ಮಿ' ಅಂತ ಹಾಡುತ್ತಲೇ ಅಮ್ಮನ ಕೆನ್ನೆಗೆ ರಣ್‌ವೀರ್ ಸಿಂಗ್ ಸಿಹಿ ಮುತ್ತು ನೀಡುತ್ತಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ತಾಯಿ ಅಂಜು ಭವ್‌ನಾನಿ ಬರ್ತಡೇ ಪಾರ್ಟಿಗೆ ರಣವೀರ್ ಸಿಂಗ್ ಜೀನ್ಸ್ ಪ್ಯಾಂಟ್ ಹಾಗೂ ಡೆನಿಮ್ ಜಾಕೆಟ್ ಹಾಗೂ ಟೋಪಿ ಧರಿಸಿ ಆಕರ್ಷಿಸಿದರು.