ಕರ್ನಾಟಕ

karnataka

ETV Bharat / sitara

ಜನವರಿಯಲ್ಲಿ ’ವಿ ಕ್ಯಾನ್’ ಬಿ ಹೀರೋಸ್ ವೆಬ್​-ಸೀರಿಸ್​​: ಪ್ರೇಕ್ಷಕರ ಪ್ರತಿಕ್ರಿಯೆಗೆ ಪ್ರಿಯಾಂಕಾ ವೇಟಿಂಗ್​ - ವಿ ಕ್ಯಾನ್ ಬಿ ಹೀರೋಸ್ ವೆಬ್​-ಸೀರಿಸ್

ಜನವರಿ ತಿಂಗಳಿನಲ್ಲಿ ನೆಟ್​​ಫ್ಲಿಕ್ಸ್​ನಲ್ಲಿ ತೆರಕಾಣಲಿರುವ ವಿ ಕ್ಯಾನ್ ಬಿ ಹೀರೋಸ್ ವೆಬ್​ - ಸೀರಿಸ್​​ ಬಗ್ಗೆ ಪ್ರಿಯಾಂಕಾ ಚೋಪ್ರಾ ಸಂತಸ ವ್ಯಕ್ತಪಡಿಸಿದ್ದು, ಚಿತ್ರದ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ಹೇಳಿದ್ದಾರೆ.

Priyanka
ಪ್ರಿಯಾಂಕಾ

By

Published : Nov 20, 2020, 2:14 PM IST

ಮುಂಬೈ: ನೆಟ್‌ಫ್ಲಿಕ್ಸ್​​ನಲ್ಲಿ ಬರಲಿರುವ "ವಿ ಕ್ಯಾನ್ ಬಿ ಹೀರೋಸ್"​ ತಂಡದಲ್ಲಿ ಕಾರ್ಯ ನಿರ್ವಹಿಸಿರುವುದು ತುಂಬಾ ಸಂತಸ ದಾಯಕವಾಗಿದೆ ಹಾಗೂ ಈ ವೆಬ್​ - ಸೀರಿಸ್​​ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಕಾತುರತೆ ನನ್ನಲ್ಲಿದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಹೇಳಿದ್ದಾರೆ.

ವಿ ಕ್ಯಾನ್ ಬಿ ಹೀರೋಸ್ ವೆಬ್​ - ಸೀರಿಸ್​​ ಈಗಾಗಲೇ ಆ್ಯಕ್ಷನ್​ - ಸಸ್ಪೆನ್ಸ್​​ ಮೂವಿ ಎನ್ನಲಾಗಿದ್ದು, ಈ ಹಿಂದೆ ಬ್ಲಾಕ್​ ಬಸ್ಟರ್​​ ಮೂವಿ 'ಅಲಿಟಾ ಬ್ಯಾಟಲ್ ಏಂಜಲ್' ಚಿತ್ರವನ್ನು ನಿರ್ಮಿಸಿದ್ದ ರಾಬರ್ಟ್ ರೊಡ್ರಿಗಸ್ ಈ ಚಿತ್ರಕ್ಕೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಪ್ರಿಯಾಂಕ ಚೋಪ್ರಾ ಗುರುವಾರ ಈ ವೆಬ್​ - ಸೀರಿಸ್​​ ಟೀಸರ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಸಿನಿಮಾ ಸೆಟ್‌ಗಳಲ್ಲಿನ ಸಿಹಿ ಅನುಭವಗಳನ್ನೂ ಸಹ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಜೊತೆ ನಟರಾದ ಪೆಡ್ರೊ ಪ್ಯಾಸ್ಕಲ್, ಕ್ರಿಶ್ಚಿಯನ್ ಸ್ಲೇಟರ್, ಬಾಯ್ಡ್ ಹಾಲ್‌ಬ್ರೂಕ್, ಸುಂಗ್ ಕಾಂಗ್ ಮತ್ತು ಹಿರಿಯ ನಟ ಕ್ರಿಸ್ಟೋಫರ್ ಮೆಕ್‌ಡೊನಾಲ್ಡ್ ನಟಿಸಿದ್ದು, ಬಾಲ ತಾರೆಯರಾದ ಅಕಿರಾ ಅಕ್ಬರ್, ನಾಥನ್ ಬ್ಲೇರ್, ಆಂಡ್ರ್ಯೂ ಡಯಾಜ್, ಆಂಡಿ ವಾಲ್ಕೆನ್ ಮತ್ತು ಹಾಲಾ ಫಿನ್ಲೆ ಕೂಡ ತಾರಾಗಣದಲ್ಲಿದ್ದಾರೆ.

ಬಹು ನಿರೀಕ್ಷಿತ ವಿ ಕ್ಯಾನ್ ಬಿ ಹೀರೋಸ್ ವೆಬ್​-ಸೀರಿಸ್​​ ಜನವರಿ 1, 2021 ರಂದು ನೆಟ್​​ಫ್ಲಿಕ್ಸ್​​ನಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ.

ABOUT THE AUTHOR

...view details