ಹೈದರಾಬಾದ್(ತೆಲಂಗಾಣ) :ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ನಟಿಸಿರುವ ಬಹು ನಿರೀಕ್ಷಿತ 'ಗೆಹ್ರೈಯಾನ್' ಚಿತ್ರದ ಆಲ್ಬಂ ಹಾಡೊಂದು ಬಿಡುಗಡೆಯಾಗಿದೆ. ಟೀಸರ್ ಮತ್ತು ಟ್ರೈಲರ್ನಿಂದಲೇ ಗಮನ ಸೆಳೆದಿರುವ ಚಿತ್ರ ಇದೀಗ ವಿಡಿಯೋ ಹಾಡು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ದೀಪಿಕಾ-ಸಿದ್ಧಾಂತ್ ಅವರ ರೊಮ್ಯಾಂಟಿಕ್ ಟ್ರ್ಯಾಕ್ನಿಂದ ಆರಂಭವಾಗುವ ಹಾಡು ಯುಟ್ಯೂಬ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಲಿಪ್‌ಲಾಕ್ ಹಾಗೂ ಹಸಿ-ಬಿಸಿ ಸೀನ್ಗಳಿಂದಲೇ ಕೂಡಿರುವ ಹಾಡು ನೋಡುಗರ ತವಕ ಹೆಚ್ಚಿಸದೇ ಇರದು. ಈ ಹಾಡುರಸಿಕತೆಗೆ ಉತ್ತೇಜನ ನೀಡುವ ಮತ್ತು ಯುವ ಸಮುದಾಯವನ್ನು ಟಾರ್ಗೆಟ್ ಮಾಡಿಕೊಂಡೇ ಬಿಡುಗಡೆ ಮಾಡಲಾಗಿದೆಯಂತೆ.
ಇದನ್ನೂ ಓದಿ: ಆ ಒಂದು ಸನ್ನಿವೇಶಕ್ಕೆ ಬರೋಬ್ಬರಿ 48 ರಿಟೇಕ್ ಪಡೆದರಂತೆ ದೀಪಿಕಾ!
ಯಾವಾಗಲೂ ಒಬ್ಬರಿಗೊಬ್ಬರು ಅಂಟಿಕೊಂಡೇ ಇರುವ ದೀಪಿಕಾ ಮತ್ತು ಸಿದ್ಧಾಂತ್ ನಡುವಿನ ದೃಶ್ಯ ಜಾಲತಾಣದಲ್ಲಿ ಈಗಾಗಲೇ ಜಾಗ ಪಡೆದಿವೆ. ಇದೀಗ ಈ ಹಾಡು ಸಹ ಅದೇ ಮಾರ್ಗ ಅನುಸರಿಸಿದೆ. ಕೇವಲ ಎರಡು ನಿಮಿಷಗಳಿರುವ ಈ ವಿಡಿಯೋದಲ್ಲಿ ಅವರ ನಡುವಿನ ಅಗಾಧ ಸಂಬಂಧದ ಬಗ್ಗೆ ಹೇಳುತ್ತದೆ.