ಮುಂಬೈ: ಈ ವರ್ಷದ ಗಣೇಶೋತ್ಸವ ಹೆಚ್ಚಿನ ಸಂಭ್ರಮದಿಂದ ಕೂಡಿರದೆ ಸರಳವಾಗಿ ನೆರವೇರಿದೆ. ಬಾಲಿವುಡ್ ಅಂಗಳದಲ್ಲೂ ವಿಘ್ನ ನಿವಾರಕನ ಹಬ್ಬವನ್ನು ಆಚರಿಸಲಾಗಿದೆ.
ಬಾಲಿವುಟ್ ನಟ, ನಟಿಮಣಿಯರ ಮನೆಗಳಲ್ಲಿ ಗಣಪ ಮೂರ್ತಿ ಪ್ರತಿಷ್ಠಾಪಿಸಿ ನಿಮಜ್ಜನ ಮಾಡಲಾಗಿದೆ. ನಟ ಶಾರುಖ್ ಖಾನ್ ಭಾನುವಾರ ಸರ್ಕಾರಿ ನಿಯಮಾವಳಿಯಂತೆ ಗಣಪನ ನಿಮಜ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಟಿ ಶಿಲ್ಪಾ ಶೆಟ್ಟಿ ಮತ್ತು ಶ್ರದ್ಧಾ ಕಪೂರ್ ಸಹ ಗಣಪನ ನಿಮಜ್ಜನ ನೆರವೇರಿಸಿ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ.
ಶಾರುಖ್ ಕಪ್ಪು-ಬಿಳುಪಿನ ಸೆಲ್ಫಿಯೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ‘ಗಣಪನ ಪ್ರಾರ್ಥನೆ ಹಾಗೂ ನಿಮಜ್ಜನ ನೆರವೇರಿಸಲಾಗಿದೆ. ಗಣಪ ನಿಮ್ಮ ಹಾಗೂ ನಿಮ್ಮ ಕುಟುಂಬಸ್ಥರಿಗೆ ಒಳಿತು ಮಾಡಲಿ,... ಗಣಪತಿ ಬಪ್ಪಾ ಮೋರಯಾ’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಶ್ರದ್ಧಾ ಕಪೂರ್ ಪರಿಸರ ಸ್ನೇಹಿ ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಮನೆಯಲ್ಲಿಯೇ ನಿಮಜ್ಜನ ಮಾಡಿದ್ದಾರೆ. ಪುಟ್ಟ ಗಾತ್ರದ ಪರಿಸರ ಸ್ನೇಹಿ ಗಣಪನನ್ನು ಮನೆಯಲ್ಲಿನ ದೊಡ್ಡ ಬಕೆಟ್ಗೆ ನೀರು ತುಂಬಿಸಿ ನಿಮಜ್ಜನ ನೆರವೇರಿಸಿದ್ದಾರೆ.
ಇವರಂತೆಯೇ ಶಿಲ್ಪಾ ಶೆಟ್ಟಿ ಹಾಗೂ ಅವರ ಕುಟುಂಬ ಸಹ ನಿಮಜ್ಜನ ನೆರವೇರಿಸಿದೆ. ಆದರೆ ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣಪನ ಮುಂದೆ ವಿವಿಧ ರೀತಿಯ ಸಿಹಿ ತಿನಿಸುಗಳು ಸೇರಿ ಕುಟುಂಬಸ್ಥರು ನೃತ್ಯ ಮಾಡಿ ಗಣಪನ ನಿಮಜ್ಜನದಲ್ಲಿ ಪಾಲ್ಗೊಂಡಿದ್ದಾರೆ.