ಕರ್ನಾಟಕ

karnataka

ETV Bharat / sitara

ಆಪತ್ತಿಗೆ ಆಗುವ ನೆಂಟ ಸೋನು ಸೂದ್‌.. ಸಹಾಯ ಅಲ್ಲಗಳೆಯಲೆತ್ನಿಸಿದ ಡಿಸಿಗೆ​ ಆಪದ್ಬಾಂಧವನಖಡಕ್‌ ಪ್ರತಿಕ್ರಿಯೆ.. - ಸೋನು ಸೂದ್ ಒಡಿಶಾ ಸುದ್ದಿ

ಸರ್, ನಾವು ಬೆಡ್‌ಗಾಗಿ ನಿಮ್ಮನ್ನು ಸಂಪರ್ಕಿಸಿಲ್ಲ. ಸೋಂಕಿತ ನಮ್ಮನ್ನು ಬೆಡ್ ಒದಗಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ನಾವು ಸೋಂಕಿತನಿಗೆ ಬೆಡ್ ವ್ಯವಸ್ಥೆ ಮಾಡಿದ್ದೇವೆ. ಈ ಕುರಿತ ಸ್ಕ್ರೀನ್ ಶಾಟ್ ಇಲ್ಲಿದೆ. ನಿಮ್ಮ ಕಚೇರಿಯಿಂದ ಈ ಕುರಿತು ಪರಿಶೀಲನೆ ಮಾಡಬಹುದು..

sonu sood
sonu sood

By

Published : May 18, 2021, 4:22 PM IST

ಹೈದರಾಬಾದ್​ :ಬಾಲಿವುಡ್​ ನಟ ಸೋನು ಸೂದ್​ ಅವರು ಕೊರೊನಾ ಸಂದರ್ಭದಲ್ಲಿ ಅನೇಕರಿಗೆ ಸಹಾಯ ಮಾಡಿದ್ದಾರೆ. ಅಂತೆಯೇ ಒಡಿಶಾದ ಗಂಜಂ ಜಿಲ್ಲೆಯ ಸೋಂಕಿತನೋರ್ವ ಬೆಡ್​ ಸಿಗದೆ ಪರದಾಡುತ್ತಿದ್ದ. ಆತ ಸೋನು ಸೂದ್​ ಸಹಾಯ ಕೇಳಿದ್ದು, ತಕ್ಷಣವೇ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಛೆ ಮಾಡಿದ್ದಾರೆ. ಈ ಬಗ್ಗೆ ಸೋನು ಸೂದ್ ಟ್ವೀಟ್ ಮೂಲಕ ಖಚಿತ ಪಡಿಸಿದ್ದಾರೆ.

ಆದರೆ, ಇದೇ ಟ್ವೀಟ್‌ಗೆ ಗಂಜಂ ಜಿಲ್ಲಾಧಿಕಾರಿ ಕಚೇರಿ ಪ್ರತಿಕ್ರಿಯೆ ನೀಡಿದ್ದು, “ಬೆಡ್ ವ್ಯವಸ್ಥೆ ಕುರಿತು ಸೋನ್ ಸೂದ್ ಹಾಗೂ ಸೂದ್ ಫೌಂಡೇಷನ್‌ನಿಂದ ಯಾವುದೇ ಮಾಹಿತಿಯಾಗಲಿ, ಸೂಚನೆಯಾಗಲಿ ಬಂದಿಲ್ಲ. ಮನವಿ ಮಾಡಿದ ಸೋಂಕಿತ ಹೋಮ್ ಐಸೋಲೇಶನ್‌ನಲ್ಲಿದ್ದು, ಯಾವುದೇ ಸಮಸ್ಯೆ ಇಲ್ಲ, ಬೆಡ್ ಸಮಸ್ಯೆಯೂ ಇಲ್ಲ” ಎಂದಿದ್ದಾರೆ.

ಟ್ವೀಟ್ ಬೆನ್ನಲ್ಲೇ, ಸೋನು ಸೂದ್ ಸ್ಪಷ್ಟನೆ ನೀಡಿದ್ದು,"ಸರ್, ನಾವು ಬೆಡ್‌ಗಾಗಿ ನಿಮ್ಮನ್ನು ಸಂಪರ್ಕಿಸಿಲ್ಲ. ಸೋಂಕಿತ ನಮ್ಮನ್ನು ಬೆಡ್ ಒದಗಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ನಾವು ಸೋಂಕಿತನಿಗೆ ಬೆಡ್ ವ್ಯವಸ್ಥೆ ಮಾಡಿದ್ದೇವೆ.

ಈ ಕುರಿತ ಸ್ಕ್ರೀನ್ ಶಾಟ್ ಇಲ್ಲಿದೆ. ನಿಮ್ಮ ಕಚೇರಿಯಿಂದ ಈ ಕುರಿತು ಪರಿಶೀಲನೆ ಮಾಡಬಹುದು. ಇಲ್ಲಿ ಸಂಪರ್ಕ ಸಂಖ್ಯೆ ನೀಡಲಾಗಿದೆ. ಜೈ ಹಿಂದ್" ಎಂದು ಸೂದ್ ಖಡಕ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಳಿಕ ಗಂಜಮ್ ಜಿಲ್ಲಾಧಿಕಾರಿ ಕಚೇರಿ ಮತ್ತೊಂದು ಸ್ಪಷ್ಟನೆ ನೀಡಿದ್ದು,"ವ್ಯವಸ್ಥೆಯನ್ನು ವಿರೋಧಿಸುವ ಉದ್ದೇಶ ನಮ್ಮದ್ದಲ್ಲ. ಗಂಜಂ ತಂಡ ಸೋಂಕಿತರಿಗೆ ದಿನದ 24 ಗಂಟೆ ಕೆಲಸ ಮಾಡುತ್ತಿದೆ.

ಆದರೂ ಸೋಂಕಿತರಿಗೆ ಬೆಡ್ ಸಿಕ್ಕಿಲ್ಲ ಎಂದಾದರೆ ಅದನ್ನು ಪರಿಶೀಲಿಸುವುದು, ಆ ಕುರಿತು ಗಮನ ಹರಿಸುವುದು ನಮ್ಮ ಕೆಲಸವಾಗಿದೆ. ಹೀಗಾಗಿ, ನಾವು ಕೇಳಿದ್ದೇವೆ. ನೀವು ಹಾಗೂ ನಿಮ್ಮ ಸಂಸ್ಥೆ ಅತ್ಯುತ್ತಮ ಕೆಲಸ ಮಾಡುತ್ತಿದೆ" ಎಂದು ಟ್ವೀಟ್ ಮಾಡಿದೆ.

ABOUT THE AUTHOR

...view details