ಹೈದರಾಬಾದ್: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ಸಿದ್ಧವಾಗಿರುವ ‘ಗಂಗುಬಾಯಿ ಕಥಿಯಾವಾಡಿ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದಕ್ಕೂ ಮೊದಲು ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿದ್ದರು.
ಇದೀಗ ಟೀಸರ್ ರಿಲೀಸ್ ಮಾಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಂದು ಸಂಜಯ್ ಲೀಲಾ ಬನ್ಸಾಲಿ 57ನೇ ಹುಟ್ಟುಹಬ್ಬ ಹಿನ್ನೆಲೆ ಟೀಸರ್ ರಿಲೀಸ್ ಆಗಿದ್ದು, ಈ ಕುರಿತು ನಟಿ ಆಲಿಯಾ ಭಟ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಶುಭಹಾರೈಸಿದ್ದಾರೆ.
ಅಲ್ಲದೆ ಟೀಸರ್ ಶೇರ್ ಮಾಡಿರುವ ಆಲಿಯಾ, ಜನ್ಮದಿನದ ಶುಭಾಶಯಗಳು ಸರ್... ನೀವು ಮತ್ತು ನಿಮ್ಮ ಜನ್ಮ ದಿನವನ್ನು ಆಚರಿಸಲು ಇದಕ್ಕಿಂತ ಉತ್ತಮವಾದ ಮಾರ್ಗವನ್ನು ಯೋಚಿಸಲಾರೆ. ಗಂಗುವನ್ನು ಭೇಟಿಯಾಗಿ... ಎಂದು ಬರೆದುಕೊಂಡಿದ್ದಾರೆ.