ಮುಂಬೈ(ಮಹಾರಾಷ್ಟ್ರ) :ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ನಟಿ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಬಿಡುಗಡೆಯಾದ ಮೊದಲ ದಿನವೇ 10.5 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.
ಸಿನಿಮಾ ಬಿಡುಗಡೆಯಾದ ಮೊದಲ ದಿನದ ಕಲೆಕ್ಷನ್ ಬಗ್ಗೆ ಬನ್ಸಾಲಿ ಪ್ರೊಡಕ್ಷನ್ಸ್ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಗಂಗೂಬಾಯಿ ಜಿಂದಾಬಾದ್ ಎಂದು ಪೋಸ್ಟ್ ಬರೆಯಲಾಗಿದೆ.
ಬರಹಗಾರ ಎಸ್ ಹುಸೇನ್ ಝೈದಿ ಅವರ ಪುಸ್ತಕ ಮಾಫಿಯಾ ಕ್ವೀನ್ಸ್ ಆಫ್ ಮುಂಬೈನ ಅಧ್ಯಾಯವನ್ನು ಆಧರಿಸಿದ ಚಲನಚಿತ್ರವು 1960ರ ದಶಕದಲ್ಲಿ ಕಾಮಾಟಿಪುರದ ಅತ್ಯಂತ ಶಕ್ತಿಶಾಲಿ, ಪ್ರೀತಿಪಾತ್ರ ಮತ್ತು ಗೌರವಾನ್ವಿತ ಮೇಡಮ್‌ಗಳಲ್ಲಿ ಒಬ್ಬರಾದ ಗಂಗೂಬಾಯಿ ಪಾತ್ರಕ್ಕೆ ಆಲಿಯಾ ಜೀವ ತುಂಬಿದ್ದಾರೆ.