ಕರ್ನಾಟಕ

karnataka

ETV Bharat / sitara

ಬಾಲಿವುಡ್​ನ ಕರೀನಾ, ಅಮೃತಾಗೆ ಕೊರೊನಾ: ಮುಂಬೈನ ನಾಲ್ಕು ಕಟ್ಟಡಗಳು ಸೀಲ್​ಡೌನ್​​ - four buildings sealed after actress tested Corona positive

Mumbai COVID -19 Cases: ಬಾಲಿವುಡ್​ ನಟಿಯಲ್ಲಿ ಕೊರೊನಾ ಕಾಣಿಸಿಕೊಂಡ ನಂತರ ಮುಂಬೈನಲ್ಲಿ ನಾಲ್ಕು ಕಟ್ಟಡಗಳನ್ನು ಸೀಲ್ ಮಾಡಲಾಗಿದೆ ಎಂದು ಮುಂಬೈ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

four buildings sealed after actress tested Corona positive
ಬಾಲಿವುಡ್​ನ ಕರೀನಾ, ಅಮೃತಾಗೆ ಕೊರೊನಾ: ಮುಂಬೈನ ನಾಲ್ಕು ಕಟ್ಟಡಗಳು ಸೀಲ್​ಡೌನ್​​

By

Published : Dec 15, 2021, 7:27 AM IST

ಮುಂಬೈ: ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಮತ್ತು ಅಮೃತಾ ಅರೋರಾ ಅವರಲ್ಲಿ ಕೋವಿಡ್ ಕಾಣಿಸಿಕೊಂಡ ಕಾರಣದಿಂದ ಮುಂಬೈನಲ್ಲಿ ಇದುವರೆಗೆ ನಾಲ್ಕು ಕಟ್ಟಡಗಳನ್ನು ಸೀಲ್ ಮಾಡಲಾಗಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ಮಾಹಿತಿ ನೀಡಿದೆ.

Bollywood actors apartments seal down: ನಟ ಸೊಹೇಲ್ ಖಾನ್ ಅವರ ಪತ್ನಿ ಸೀಮಾ ಖಾನ್ ಇರುವ ಕಿರಣ್ ಅಪಾರ್ಟ್‌ಮೆಂಟ್, ಕರೀನಾ ಕಪೂರ್ ಇರುವ ಸದ್ಗುರು ಶರಣ್, ಕರಣ್ ಜೋಹರ್ ಇರುವ ದಿ ರೆಸಿಡೆನ್ಸಿ, ಅಮೃತ ಅರೋರಾ ಇರುವ ಗವರ್ನಮೆಂಟ್​ ಹೇರಿಟೇಜ್ ಅನ್ನು ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಪಾರ್ಟಿಯಲ್ಲಿ ನಟಿ ಕರೀನಾ ಕಪೂರ್ ಮತ್ತು ಅಮೃತಾ ಅರೋರಾ ಭಾಗವಹಿಸಿದ್ದು, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಅವರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಕರಣ್ ಜೋಹರ್ ಅವರ ಪಾರ್ಟಿಯಲ್ಲಿ ಸುಮಾರು 8 ರಿಂದ 10 ಮಂದಿ ಭಾಗವಹಿಸಿದ್ದರು. ನಟಿಯರಿಗೆ ಸೋಂಕು ದೃಢಪಟ್ಟ ನಂತರ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಕರಣ್ ಜೋಹರ್ ಅವರ ವರದಿ ನೆಗೆಟಿವ್ ಬಂದಿದ್ದರೂ, ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ಸೋಂಕಿತರ ವರದಿ ಇನ್ನೇನು ಬರಬೇಕಿದ್ದು, ಇನ್ನಷ್ಟು ಸಂಪರ್ಕಿತರಿಗಾಗಿ ಹುಡುಕಾಟ ಕೂಡಾ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದನ್ನೂ ಓದಿ:ಮಾಡರ್ನ್ ಲುಕ್‍ನಲ್ಲಿ ಪುಷ್ಪ ಚಿತ್ರದ ಹಾಡಿಗೆ ಮಂದಣ್ಣ ಮಸ್ತ್ ಸ್ಟೆಪ್ಸ್.. ವಿಡಿಯೋ​​

ABOUT THE AUTHOR

...view details