ಮಾಜಿ ಭುವನಸುಂದರಿ, ಬಾಲಿವುಡ್ ನಟಿ ಸುಷ್ಮಿತಾ ಸೇನ್ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ಧಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುಷ್ಮಿತಾಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ. ಸುಷ್ಮಿತಾ, ತನ್ನ ಕುಟುಂಬ ಹಾಗೂ ಪ್ರಿಯಕರ ರೊಹ್ಮನ್ ಶಾಲ್ ಜೊತೆ ನಿನ್ನೆ ರಾತ್ರಿ ಕೇಕ್ ಕಟ್ ಮಾಡುವ ಮೂಲಕ ಬರ್ತ್ಡೇ ಆಚರಿಸಿಕೊಂಡಿದ್ದಾರೆ.
ಸುಷ್ಮಿತಾ ಸೇನ್ ಮೂಲತ: ಬೆಂಗಾಳಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. 19 ನವೆಂಬರ್ 1975 ರಲ್ಲಿ ಹೈದರಾಬಾದ್ನಲ್ಲಿ ಜನಿಸಿದ ಸುಷ್ಮಿತಾ, ಚಿಕ್ಕಂದಿನಲ್ಲೇ ಮಾಡೆಲಿಂಗ್ ವೃತ್ತಿ ಆರಿಸಿಕೊಂಡರು. 1994 ಆರಂಭದಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ಹಾಗೂ ನಂತರ ಅದೇ ವರ್ಷ ಭುವನ ಸುಂದರಿ ಸ್ಪರ್ಧೆಯಲ್ಲಿ ಗೆದ್ದರು. 1994 ರಲ್ಲಿ 'ದಸ್ತಕ್' ಚಿತ್ರದ ಮೂಲಕ ಸುಷ್ಮಿತಾ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಸಿರ್ಫ್ ತುಮ್, ಬೀವಿ ನಂ 1, ಫಿಜಾ, ಫಿಲಾಲ್, ಪೈಸಾ ವಸೂಲ್, ಬೇವಫಾ, ರಾಮ್ ಗೋಪಾಲ್ ವರ್ಮಾ ಕಿ ಆಗ್ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು.