ಅಕ್ಟೋಬರ್ 24, 1976ರಲ್ಲಿ ಹರಿಯಾಣದ ಪುಟ್ಟ ಹಳ್ಳಿಯಲ್ಲಿ ಜನಿಸಿದವರು ರೀಮಾ ಲಾಂಬಾ. ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ರೀಮಾ ಲಾಂಬಾ ಬಣ್ಣದ ಬದುಕಿನ ಕಡೆಗೆ ಆಕರ್ಷಿತರಾಗಿದ್ದರು. ಚಿತ್ರರಂಗಕ್ಕೆ ಪದಾರ್ಪಣೆ ಮಾಡಬೇಕು ಎಂದಾಗ ರೀಮಾ ಲಾಂಬಾಗೆ ಕುಟುಂಬಸ್ಥರ ಸಮ್ಮತಿ ಸಿಗಲಿಲ್ಲ.
ಕುಟುಂಬಸ್ಥರ ಇಚ್ಛೆಗೆ ವಿರುದ್ಧವಾಗಿ ರೀಮಾ ಲಾಂಬಾ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಮೊದಲು ಜಾಹೀರಾತುಗಳಲ್ಲಿ ಕಾಣಿಸಿಕೊಂಡ ರೀಮಾ ಲಾಂಬಾ ನಂತರ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸತೊಡಗಿದರು. ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ತಮ್ಮ ಹೆಸರನ್ನು ಮಲ್ಲಿಕಾ ಶೆರಾವತ್ ಅಂತ ಬದಲಾಯಿಸಿಕೊಂಡರು.
ವೃತ್ತಿ ಜೀವನದ ಆರಂಭದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿದ ಮಲ್ಲಿಕಾ ಶೆರಾವತ್‌ಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ‘ಮರ್ಡರ್’. 2004ರಲ್ಲಿ ತೆರೆಕಂಡ ‘ಮರ್ಡರ್’ ಚಿತ್ರ ದೊಡ್ಡ ಹಿಟ್ ಆಯ್ತು. ಬಳಕ ‘ದಿ ಮಿತ್’, ‘ಪ್ಯಾರ್ ಕೆ ಸೈಡ್ ಎಫೆಕ್ಟ್ಸ್’, ‘ಡರ್ನಾ ಝರೂರಿ ಹೇ’ ಮುಂತಾದ ಚಿತ್ರಗಳಲ್ಲಿ ಮಲ್ಲಿಕಾ ಶೆರಾವತ್ ನಟಿಸಿದರು. ನಂತರ ಕೆಲ ಚಿತ್ರಗಳಲ್ಲಿ ಐಟಂ ಗರ್ಲ್ ಆಗಿ ಹೆಜ್ಜೆ ಹಾಕಿದ್ದರು.
ತನ್ನ ಹುಟ್ಟುಹಬ್ಬದಂದು, ಮಲ್ಲಿಕಾ ನಮಗೆ ಈಗಲೂ ತಾನು ಫಿಟ್ & ಹಾಟ್ ಎಂದು ತೋರಿಸಿಕೊಟ್ಟಿದ್ದಾರೆ. ಮಲ್ಲಿಕಾ ಬೆರಗುಗೊಳಿಸುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಹುಟ್ಟುಹಬ್ಬದ ಹುಡುಗಿ ಶೆರಾವತ್ ತಮ್ಮ ಯೆಲ್ಲೋ ಬಿಕನಿ ಫೋಟೋಗಳಿಗೆ ಫಿಟ್ ಮತ್ತು ಫ್ಯಾಬುಲಸ್ ಎಂಬ ಹ್ಯಾಶ್‌ಟ್ಯಾಗ್‌ಗಳ ಜೊತೆಗೆ ಪೋಸ್ಟ್ ಮಾಡಿದ್ದಾರೆ.
ಬರ್ತ್ಡೇ ಗರ್ಲ್ ಮಲ್ಲಿಕಾ ಹಳದಿ ಬಿಕಿನಿಯಲ್ಲಿ ಸುಂದರವಾಗಿ ಕಾಣುತ್ತಿದ್ದು, ಅವರ ಕೆಲವು ಫೋಟೋಗಳಲ್ಲಿ ಪೂಲ್ ಸಮೀಪದಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಮಲ್ಲಿಕಾ ಶೆರಾವತ್ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ, ಅವರ ಅಭಿಮಾನಿಗಳು ನಟಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.