ಇಸ್ಮಾಯಲ್ ಖಾನ್ ಕ್ಲಿನಿಕ್ಗಳಲ್ಲಿ ಹಿಡನ್ ಕ್ಯಾಮರಾ ಇರಿಸಿ, ವೈದ್ಯರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದನಂತೆ. ಅದರಲ್ಲೂ ಮಹಿಳಾ ಡಾಕ್ಟರ್ಗಳೇ ಈತನ ಟಾರ್ಗೆಟ್. ಯಾರಿಗೂ ಗೊತ್ತಿಲ್ಲದ ಹಾಗೆ ಕ್ಯಾಮರಾಗಳನ್ನು ಇರಿಸುತ್ತಿದ್ದ ಇಸ್ಮಾಯಲ್, ನಂತರ ಅದರಲ್ಲಿರುವ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದನಂತೆ. ಸದ್ಯ ವೈದ್ಯೆಯೋರ್ವಳು ನೀಡಿರುವ ದೂರಿನ ಮೇರೆಗೆ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿದೆ.
ಲೇಡಿ ಡಾಕ್ಟರ್ ಕ್ಲಿನಿಕ್ಲ್ಲಿ ಹಿಡನ್ ಕ್ಯಾಮ್...ನಟಿಯ ಮಾಜಿ ಬಾಯ್ಫ್ರೆಂಡ್ ವಿರುದ್ಧ ದೂರು - ನಟಿಯ ಮಾಜಿ ಬಾಯ್ಫ್ರೆಂಡ್
ಲೇಡಿ ಡಾಕ್ಟರ್ ಕ್ಲಿನಿಕ್ಲ್ಲಿ ಗುಪ್ತ ಕ್ಯಾಮರಾ ಇರಿಸಿದ ಆರೋಪದಡಿ ಬಾಲಿವುಡ್ ನಟಿ ಸನಾ ಖಾನ್ ಮಾಜಿ ಪ್ರಿಯಕರ ಇಸ್ಮಾಯಿಲ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿತ್ರಕೃಪೆ: ಇನ್ಸ್ಟಾಗ್ರಾಂ
ಇನ್ನು ಇಸ್ಮಾಯಲ್ ಮೇಲೆ ದೂರು ದಾಖಲಾಗುತ್ತಿರುವುದು ಇದೇ ಮೊದಲೇನಲ್ಲ. 2014 ರಲ್ಲಿ ಹಲ್ಲೆ-ದೌರ್ಜನ್ಯದ ಪ್ರಕರಣದಡಿ ಇಸ್ಮಾಯಲ್ ಖಾನ್ , ಸನಾ ಖಾನ್ ಹಾಗೂ ಅವರ ಸಹಾಯಕ ಪೊಲೀಸರ ಅತಿಥಿಯಾಗಿದ್ದರು. ಇದೀಗ ಮತ್ತೊಮ್ಮೆ ಜೈಲು ಸೇರುವ ಭೀತಿ ಎದುರಾಗಿದೆ.
Last Updated : Jul 23, 2019, 2:55 PM IST