ಕರ್ನಾಟಕ

karnataka

ETV Bharat / sitara

ಬಾಲಿವುಡ್ ನಿರ್ದೇಶಕ ರಜತ್ ಮುಖರ್ಜಿ ಇನ್ನಿಲ್ಲ.. ಗೆಳೆಯನ ಅಗಲಿಕೆಗೆ ಮನೋಜ್‌ ಬಾಜಪೇಯಿ ಕಂಬನಿ - ರಜತ್ ಮುಖರ್ಜಿ

ನಿರ್ದೇಶಕರಾದ ಅನುಭವ್ ಸಿನ್ಹಾ ಮತ್ತು ಹನ್ಸಲ್ ಮೆಹ್ತಾ ಕೂಡ ರಜತ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಪ್ಯಾರ್​ ತೂನೆ ಕ್ಯಾ ಕಿಯಾ, ಲವ್​ ಇನ್​ ನೇಪಾಳ್​, ರೋಡ್​ ಸೇರಿ ಹಲವು ಹಿಟ್​ ಸಿನಿಮಾಗಳನ್ನು ರಜತ್ ಮುಖರ್ಜಿ ನಿರ್ದೇಶಿಸಿದ್ದರು..

Filmmaker Rajat Mukherjee dies
ಬಾಲಿವುಡ್ ನಿರ್ದೇಶಕ ರಜತ್ ಮುಖರ್ಜಿ ಇನ್ನಿಲ್ಲ

By

Published : Jul 19, 2020, 4:19 PM IST

ಮುಂಬೈ :ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್​ ಸಿನಿಮಾ ನಿರ್ದೇಶಕ ರಜತ್ ಮುಖರ್ಜಿ ಇಂದು ಬೆಳಗ್ಗೆ ಜೈಪುರದಲ್ಲಿ ನಿಧನರಾದರು. ಮುಖರ್ಜಿ ಅವರೊಂದಿಗೆ ಕೆಲಸ ಮಾಡಿದ್ದ ನಟ ಹಾಗೂ ಅವರ ಸ್ನೇಹಿತ ಮನೋಜ್ ಬಾಜಪೇಯಿ, ಟ್ವಿಟರ್​ನಲ್ಲಿ ಈ ಸುದ್ದಿಯನ್ನು ಸ್ಪಷ್ಟಪಡಿಸಿ ಕಂಬನಿ ಮಿಡಿದಿದ್ದಾರೆ.

"ನನ್ನ ಸ್ನೇಹಿತ ಮತ್ತು 'ರೋಡ್​' ಸಿನಿಮಾದ ನಿರ್ದೇಶಕ ರಜತ್ ಮುಖರ್ಜಿ ಅನಾರೋಗ್ಯದೊಂದಿಗಿನ ಸುದೀರ್ಘ ಹೋರಾಟದಲ್ಲಿ ಇಂದು ಮುಂಜಾನೆ ನಿಧನರಾದರು. ನಾವಿಬ್ಬರು ಮತ್ತೆ ಭೇಟಿಯಾಗಲು ಸಾಧ್ಯವಿಲ್ಲ ಎನ್ನುವುದನ್ನು ನನಗೆ ನಂಬಲಾಗುತ್ತಿಲ್ಲ. ಎಲ್ಲೇ ಇದ್ದರೂ ಖುಷಿಯಾಗಿರು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಮನೋಜ್ ಬಾಜಪೇಯಿ ಟ್ವೀಟ್​ ಮಾಡಿದ್ದಾರೆ.

ನಿರ್ದೇಶಕರಾದ ಅನುಭವ್ ಸಿನ್ಹಾ ಮತ್ತು ಹನ್ಸಲ್ ಮೆಹ್ತಾ ಕೂಡ ರಜತ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಪ್ಯಾರ್​ ತೂನೆ ಕ್ಯಾ ಕಿಯಾ, ಲವ್​ ಇನ್​ ನೇಪಾಳ್​, ರೋಡ್​ ಸೇರಿ ಹಲವು ಹಿಟ್​ ಸಿನಿಮಾಗಳನ್ನು ರಜತ್ ಮುಖರ್ಜಿ ನಿರ್ದೇಶಿಸಿದ್ದರು.

ABOUT THE AUTHOR

...view details