ಕರ್ನಾಟಕ

karnataka

By

Published : Nov 9, 2020, 3:38 PM IST

ETV Bharat / sitara

ಎನ್​ಸಿಬಿ ಮುಂದೆ ವಿಚಾರಣೆಗೆ ಹಾಜರಾದ ಚಿತ್ರ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ

ಡ್ರಗ್ ಜಾಲ ನಂಟು ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್​ ಚಿತ್ರ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ಎನ್​ಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

Filmmaker Feroz Nadiadwala at NCB
ಎನ್​ಸಿಬಿ ಮುಂದೆ ವಿಚಾರಣಗೆ ಹಾಜರಾದ ಫಿರೋಜ್ ನಾಡಿಯಾಡ್ವಾಲಾ

ಮುಂಬೈ : ಡ್ರಗ್​ ಜಾಲ ನಂಟು ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಫಿರೋಝ್​ ನಾಡಿಯಾಡ್ವಾಲಾ ಪತ್ನಿ ಶಬಾನಾ ಸಯೀದ್​ಳನ್ನು ಈ ಹಿಂದೆ ಎನ್​ಸಿಬಿ ಅಧಿಕಾರಿಗಳು ಬಂಧಿಸಿ ಆಕೆಯಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ನಾಡಿಯಾಡ್ವಾಲಾಗೆ ಎನ್​​ಸಿಬಿ ಸಮನ್ಸ್ ನೀಡಿತ್ತು.

ಶಬಾನಾ ಸೈಯೀದ್​ಳನ್ನು ಸೋಮವಾರ ಮಧ್ಯಾಹ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಶಬಾನಾ ಬಂಧನವಾಗಿರುವ ವಿಚಾರ ಬಾಲಿವುಡ್​ ಮಂದಿಯನ್ನು ದಿಗ್ಭಮೆಗೊಳಿಸಿದೆ.

ಕಳೆದ ಭಾನುವಾರ ಎನ್​ಸಿಬಿ ಫಿರೋಜ್ ನಾಡಿಯಾಡ್ವಾಲಾ ಮನೆಗೆ ದಾಳಿ ನಡೆಸಿದಾಗ, ಆತ ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳು ಫಿರೋಝ್​ ಮನೆ, ಇತರ ಸ್ಥಳಗಳಿಂದ ಮತ್ತು ನಾಲ್ಕು ಡ್ರಗ್ ಪೆಡ್ಲರ್​​ಗಳಿಂದ ಸುಮಾರು 3.59 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಎನ್​ಸಿಬಿ ಅಧಿಕಾರಿಗಳು ಫಿರೋಝ್- ಶಬಾನಾ ಮನೆಯಿಂದ 717.1 ಗ್ರಾಂ ಗಾಂಜಾ, 74.1 ಗ್ರಾಂ ಚರಸ್ ಮತ್ತು 95.1 ಗ್ರಾಂ ಎಂಡಿ ವಶಪಡಿಸಿಕೊಂಡಿದ್ದಾರೆ, ಪಿರೋಝ್​ನ ಜಹು ನಿವಾಸದಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ, ವಾಹಿದ್​ ಎ ಖಾದಿರ್​ ಶೈಖ್​ ಎಂಬಾತನಿಂದ 10 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details