ಕರ್ನಾಟಕ

karnataka

66 ನೇ ಫಿಲ್ಮ್‌ಫೇರ್ ಪ್ರಶಸ್ತಿ 2021: ಇರ್ಫಾನ್ ಖಾನ್​, ಬಿಗ್​ ಬಿ ಅಭಿನಯಕ್ಕೆ ಒಲಿದ ಅತ್ಯುನ್ನತ ಗೌರವ

By

Published : Mar 28, 2021, 12:07 PM IST

ಶನಿವಾರ ನಡೆದ 66 ನೇ ವಿಮಲ್​ ಎಲೈಚಿ ಫಿಲ್ಮ್‌ಫೇರ್ ಸಮಾರಂಭದ ಡಿಜಿಟಲ್ ಆವೃತ್ತಿಯಲ್ಲಿ, ತಾಪ್ಸೀ ಪನ್ನುಗೆ ಅತ್ಯುತ್ತಮ ನಟಿ ಮತ್ತು ದಿವಂಗತ ಇರ್ಫಾನ್ ಖಾನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಯಿತು. ಫಿಲ್ಮ್‌ಫೇರ್ 2021 ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.

Filmfare Awards winners 2021
66 ನೇ ಫಿಲ್ಮ್‌ಫೇರ್ ಪ್ರಶಸ್ತಿ 2021

ಮುಂಬೈ: 66 ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಮುಂಬೈನಲ್ಲಿ ಶನಿವಾರ ರಾತ್ರಿ ನಡೆಯಿತು.

ವಿಜೇತರ ಪಟ್ಟಿ ಇಂತಿದೆ:

  • ಅತ್ಯುತ್ತಮ ಆಕ್ಷನ್: ತಾನಾಜಿ: ದಿ ಅನ್​ಸಂಗ್ ವಾರಿಯರ್​ ಚಿತ್ರಕ್ಕಾಗಿ ರಂಜಾನ್ ಬುಲುಟ್, ಆರ್.ಪಿ. ಯಾದವ್
  • ಅತ್ಯುತ್ತಮ ಬ್ಯಾಕ್​ಗ್ರೌಂಡ್​ ಸ್ಕೋರ್​: ಥಪ್ಪಡ್​ ಚಿತ್ರಕ್ಕಾಗಿ ಮಂಗೇಶ್ ಊರ್ಮಿಳಾ ಧಕ್ಡೆ
  • ಅತ್ಯುತ್ತಮ ಛಾಯಾಗ್ರಹಣ: ಗುಲಾಬೊ ಸೀತಾಬೊ ಚಿತ್ರಕ್ಕಾಗಿ ಅವಿಕ್ ಮುಖೋಪಾಧ್ಯಾಯ
  • ಅತ್ಯುತ್ತಮ ನೃತ್ಯ ಸಂಯೋಜನೆ: ದಿಲ್ ಬೆಚರಾ ಚಿತ್ರಕ್ಕಾಗಿ ಫರಾಹ್ ಖಾನ್
  • ಅತ್ಯುತ್ತಮ ವೇಷಭೂಷಣ ವಿನ್ಯಾಸ: ಗುಲಾಬೊ ಸೀತಾಬೊಗಾಗಿ ವೀರಾ ಕಪೂರ್
  • ಅತ್ಯುತ್ತಮ ಸಂಕಲನ: ಥಪ್ಪಡ್​ ಚಿತ್ರಕ್ಕಾಗಿ ಯಶಾ ಪುಷ್ಪಾ ರಾಮ್‌ಚಂದಾನಿ
  • ಅತ್ಯುತ್ತಮ ಪ್ರೊಡಕ್ಷನ್​ ಡಿಸೈನ್: ಗುಲಾಬೊ ಸೀತಾಬೊಗಾಗಿ ಮನಸಿ ಧ್ರುವ್ ಮೆಹ್ತಾ
  • ಅತ್ಯುತ್ತಮ ಧ್ವನಿ ವಿನ್ಯಾಸ: ಥಪ್ಪಡ್​ ಚಿತ್ರಕ್ಕಾಗಿ ಕಾಮೋಡ್ ಖರಡೆ
  • ಅತ್ಯುತ್ತಮ ವಿಎಫ್‌ಎಕ್ಸ್: ತಾನಾಜಿ: ದಿ ಅನ್​ಸಂಗ್​ ವಾರಿಯರ್​ ಚಿತ್ರಕ್ಕಾಗಿ ಪ್ರಸಾದ್ ಸುತಾರ್
  • ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ): ಥಪ್ಪಡ್​ ಚಿತ್ರಕ್ಕಾಗಿ 'ಏಕ್ ತುಕ್ಡಾ ಧೂಪ್' ಹಾಡು ಹಾಡಿದ ರಾಘವ್ ಚೈತನ್ಯ
  • ಅತ್ಯುತ್ತಮ ಪ್ಲೇಬ್ಯಾಕ್ ಸಿಂಗರ್ (ಸ್ತ್ರೀ): ಮಲಾಂಗ್ ಶೀರ್ಷಿಕೆ ಗೀತೆಗಾಗಿ ಆಸೀಸ್ ಕೌರ್
  • ಅತ್ಯುತ್ತಮ ಮ್ಯುಸಿಕ್​ ಆಲ್ಬಮ್: ಲೂಡೋಗಾಗಿ ಪ್ರೀತಮ್
  • ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ: ಗುಲಾಬೊ ಸೀತಾಬೊ ಚಿತ್ರದ ಜುಹಿ ಚತುರ್ವೇದಿ
  • ಅತ್ಯುತ್ತಮ ಸಾಹಿತ್ಯ: ಚಪಾಕ್
  • ಜೀವಮಾನ ಸಾಧನೆ ಪ್ರಶಸ್ತಿ: ಇರ್ಫಾನ್ ಖಾನ್
  • ಅತ್ಯುತ್ತಮ ಪೋಷಕ ನಟ: ತಾನಾಜಿ: ದಿ ಅನ್​ಸಂಗ್​ ವಾರಿಯರ್​ನಲ್ಲಿ ನಟಿಸಿದ ಸೈಫ್ ಅಲಿ ಖಾನ್
  • ಅತ್ಯುತ್ತಮ ಪೋಷಕ ನಟಿ: ಗುಲಾಬೊ ಸೀತಾಬೊ ಚಿತ್ರಕ್ಕಾಗಿ ಫಾರೋಖ್ ಜಾಫರ್
  • ಅತ್ಯುತ್ತಮ ಚಿತ್ರ: ಥಪ್ಪಡ್
  • ಅತ್ಯುತ್ತಮ ನಿರ್ದೇಶಕ: ತಾನಾಜಿ: ದಿ ಅನ್​ಸಂಗ್ ವಾರಿಯರ್​ನ ಓಂ ರೌತ್
  • ಲೀಡಿಂಗ್​ ರೋಲ್​ನ ಅತ್ಯುತ್ತಮ ನಟ: ಆಂಗ್ರೆಜಿ ಮೀಡಿಯಂಗಾಗಿ ಇರ್ಫಾನ್ ಖಾನ್
  • ಲೀಡಿಂಗ್​ ರೋಲ್​ನ ಅತ್ಯುತ್ತಮ ನಟಿ: ಥಪ್ಪಡ್​ಗಾಗಿ ತಾಪ್ಸಿ ಪನ್ನು

ಕ್ರಿಟಿಕ್ಸ್ ಅವಾರ್ಡ್ಸ್:

  • ಅತ್ಯುತ್ತಮ ನಟ : ಗುಲಾಬೊ ಸೀತಾಬೊ ಚಿತ್ರದಲ್ಲಿನ ನಟನೆಗೆ ಅಮಿತಾಬ್ ಬಚ್ಚನ್
  • ಅತ್ಯುತ್ತಮ ನಟಿ: ಸರ್(SIR) ಚಿತ್ರಕ್ಕಾಗಿ ತಿಲೋತ್ತಮ ಶೋಮೆ

ABOUT THE AUTHOR

...view details