ಮುಂಬೈ :ಮಾ.11ರಂದು ಬಿಡುಗಡೆಯಾದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಗೆ ಪಿಎಂ ಮೋದಿ ಸೇರಿದಂತೆ ಎಲ್ಲೆಡೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ. ಇದರ ನಡುವೆ ನಿರ್ದೇಶಕ ಚಿತ್ರದ ಕುರಿತಂತೆ ಆಸಕ್ತಿದಾಯಕವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರವು 90ರ ದಶಕದಲ್ಲಿ ಕಾಶ್ಮೀರಿ ಪಂಡಿತರು ಎದುರಿಸಿದ ನೋವು, ಸಂಕಟ, ಹೋರಾಟ ಮತ್ತು ಆಘಾತದ ಕುರಿತ ಹೃದಯ ವಿದ್ರಾವಕ ನಿರೂಪಣೆಯನ್ನು ಹೊಂದಿದೆ. ಸಿನಿಮಾ ರಿಲೀಸ್ ಆದಾಗಿನಿಂದ ವಿಮರ್ಶಕರಿಂದ, ವೀಕ್ಷಕರಿಂದ ಸಾಕಷ್ಟು ಟೀಕೆಗಳು ಕೂಡ ಕೇಳಿ ಬರುತ್ತಿವೆ.
ಸಿನಿಮಾದ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿವೇಕ್, ಭಾರತದ ಯಾವ ಕಥೆಯನ್ನು ಹೇಳಲು ಭಯಪಡುತ್ತಾರೋ ಆ ಕಥೆಯನ್ನು ನಾನು ಸಿನಿಮಾದ ಮೂಲಕ ಹೇಳಿದ್ದೇನೆ. ಯಾವ ನಟರು, ಕ್ಯಾಮೆರಾಮ್ಯಾನ್ಗಳು ಚಿತ್ರದಲ್ಲಿ ನಟಿಸಲು ಸಿದ್ಧರಿರಲಿಲ್ಲ.