ಕರ್ನಾಟಕ

karnataka

ETV Bharat / sitara

'ಗಂಗೂಬಾಯಿ ಕಥಿಯಾವಾಡಿ' ತಂಡದೊಂದಿಗೆ ಮತ್ತೆ ಸೇರಿದ್ದಕ್ಕೆ ಆಲಿಯಾ ಭಟ್ ಸಂತಸ - ಸಂಜಯ್​ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಆಲಿಯಾ ಭಟ್​​ ಅಭಿನಯ

ಹಲವಾರು ತಿಂಗಳುಗಳ ನಂತರ ಕ್ಯಾಮೆರಾ ಎದುರಿಸಲು ಉತ್ಸುಕವಾಗಿದ್ದರೂ, ಪ್ರಸ್ತುತ ಸನ್ನಿವೇಶದಲ್ಲಿ ನಾವೆಲ್ಲಾ ಬಹಳ ಜಾಗರೂಕರಾಗಿದ್ದೇವೆ ಎಂದಿದ್ದಾರೆ. ಇದೇ ವೇಳೆ ಗಂಗೂಬಾಯಿಯಾಗಿ ತೆರೆ ಮೇಲೆ ಬರಲು ರೆಡಿ ಆಗ್ತಿರುವ ಈ ಬೆಡಗಿ ಬನ್ಸಾಲಿ ಟೀಂ​ ಜೊತೆ ಮತ್ತೆ ಸೇರಿದ್ದು ಖುಷಿ ತಂದಿದೆ ಅಂದಿದ್ದಾರೆ..

Alia Bhatt
ಆಲಿಯಾ ಭಟ್​

By

Published : Dec 6, 2020, 1:08 PM IST

ಮುಂಬೈ: ಲಾಕ್​ಡೌನ್ ಘೋಷಿಸುವ ಮೊದಲು ನಟಿ ಆಲಿಯಾ ಭಟ್ 'ಗಂಗೂಬಾಯಿ ಕಥಿಯಾವಾಡಿ 'ಚಿತ್ರೀಕರಣದಲ್ಲಿ ನಿರತರಾಗಿದ್ದರು. ಲಾಕ್​ಡೌನ್ ಕಾರಣ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಸೆಟ್‌ಗೆ ಬಂದಿರುವ ನಟಿ, ಗಂಗೂಬಾಯಿ ಕಥಿಯಾವಾಡಿ ತಂಡದೊಂದಿಗೆ ಮತ್ತೆ ಒಂದಾಗಲು ತುಂಬಾ ಖುಷಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಆಲಿಯಾ ಭಟ್​

2020 ವರ್ಷ ಎಲ್ಲರ ಪಾಲಿಗೆ ಕರಾಳ ವರ್ಷ. ಅದರಲ್ಲೂ ಚಿತ್ರೋದ್ಯೋಮಕ್ಕಂತೂ ಹೆಚ್ಚಿನ ಹೊಡೆತ ನೀಡಿದೆ. ನಮಗೆಲ್ಲಾ ಇದು ಸವಾಲಿನ ವರ್ಷವಾಗಿತ್ತು ಎಂದಿರುವ 27ರ ಹರೆಯದ ಈ ಚೆಲುವೆ ಕೆಲವು ಕೋವಿಡ್​ ಮಾರ್ಗಸೂಚಿಗಳೊಂದಿಗೆ ಸಿನಿಮಾ ಚಿತ್ರೀಕರಣ ಮರು ಆರಂಭವಾಗಿದೆ.

ಹಲವಾರು ತಿಂಗಳುಗಳ ನಂತರ ಕ್ಯಾಮೆರಾ ಎದುರಿಸಲು ಉತ್ಸುಕವಾಗಿದ್ದರೂ, ಪ್ರಸ್ತುತ ಸನ್ನಿವೇಶದಲ್ಲಿ ನಾವೆಲ್ಲಾ ಬಹಳ ಜಾಗರೂಕರಾಗಿದ್ದೇವೆ ಎಂದಿದ್ದಾರೆ. ಇದೇ ವೇಳೆ ಗಂಗೂಬಾಯಿಯಾಗಿ ತೆರೆ ಮೇಲೆ ಬರಲು ರೆಡಿ ಆಗ್ತಿರುವ ಈ ಬೆಡಗಿ ಬನ್ಸಾಲಿ ಟೀಂ​ ಜೊತೆ ಮತ್ತೆ ಸೇರಿದ್ದು ಖುಷಿ ತಂದಿದೆ ಅಂದಿದ್ದಾರೆ.

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ವೇಶ್ಯಾಗೃಹವೊಂದರ ಒಡತಿಯ ಸುತ್ತ ಸುತ್ತುವ ಕಥೆ ಹೊಂದಿದೆ. ಮಾಫಿಯಾ ರಾಣಿ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದು, ಗಂಗೂಬಾಯಿ ಕಥಿಯಾವಾಡಿಯವರನ್ನು 'ದಿ ಮೇಡಂ ಆಫ್ ಕಾಮಾಟಿಪುರ' ( Madame Of Kamathipura) ಎಂದೂ ಕರೆಯಲಾಗುತ್ತಿತ್ತು.

ಗಂಗೂಬಾಯಿ ಕಥಿಯಾವಾಡಿ ಹೊರತುಪಡಿಸಿ ಆಲಿಯಾ ಭಟ್​ ಸದ್ಯ ಬ್ರಹ್ಮಾಸ್ತ್ರ, ಸಡಕ್​ -2, ಆರ್​ಆರ್​ಆರ್​ ಸೇರಿದಂತೆ ಇತರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ABOUT THE AUTHOR

...view details