ಹೈದರಾಬಾದ್: ಅಂತಾರಾಷ್ಟ್ರೀಯ ಅಪ್ಪಂದಿರ ದಿನಾಚರಣೆ ಹಿನ್ನೆಲೆ ಬಾಲಿವುಡ್ ಸ್ಟಾರ್ಗಳು, ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯ ಸಂದೇಶಗಳೊಂದಿಗೆ ತಮ್ಮ ತಂದೆಯಂದಿರಿಗೆ ಶುಭಾಶಯ ಕೋರಿದ್ದಾರೆ.
ನಟಿ ಕಂಗನಾ ರಣಾವತ್ ತನ್ನ ತಂದೆಯೊಂದಿಗಿನ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು, ಜೀವನದಲ್ಲಿ ನನ್ನ ತಂದೆ ನನಗೇನು ಬೇಕೋ ಅದನ್ನೆಲ್ಲ ಕೊಟ್ಟಿದ್ದಾರೆ. ಒಮ್ಮೆ ನಾನು ಆಸ್ಪತ್ರೆಗೆ ಹೋಗಿದ್ದಾಗ ಇಂಜೆಕ್ಷನ್ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದೆ. ಆಗ ನನ್ನ ಪಪ್ಪ ಅಮ್ಮನಿಗೆ ಗದರಿದರು. ಇಂಥ ನಿಸ್ವಾರ್ಥ ಪ್ರೀತಿಯ ಚಿಲುಮೆಗೆ ಹ್ಯಾಪಿ ಫಾದರ್ಸ್ ಡೇ ಎಂದು ಬರೆದಿದ್ದಾರೆ.
ನಟಿ ಜಾಹ್ನವಿ ಕಪೂರ್ ಅವರು ತಂದೆ ಬೋನಿ ಕಪೂರ್ರೊಂದಿಗಿನ ಫೋಟೋಗಳನ್ನು ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ’ನಾನು ಅದೃಷ್ಟಶಾಲಿಯಾಗಿದ್ದೇನೆ, ನಿಮ್ಮ ಮಗಳಾಗಿರುವುದಕ್ಕೆ’ ಎಂದು ಬರೆದಿದ್ದಾಳೆ.
ಕರೀನಾ ಕಪೂರ್, ತನ್ನ ತಂದೆ ರಣಧೀರ್ ಕಪೂರ್ ಮತ್ತು ಸೈಫ್ ಅಲಿಖಾನ್ ನಡುವೆ ನಿಂತಿರುವ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು ‘ಸೂಪರ್ ಹೀರೋಗಳು’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಅನುಷ್ಕಾ ಶರ್ಮಾ ಇನ್ಸ್ಟಾದಲ್ಲಿ ಪತಿ ವಿರಾಟ್ ಕೊಹ್ಲಿ ಮತ್ತು ಅಪ್ಪನ ಫೋಟೋ ಹಂಚಿಕೊಂಡಿದ್ದು, ಇಬ್ಬರು ಅತ್ಯಂತ ಅನುಕರಣೀಯರು. ಇಬ್ಬರ ಪ್ರೀತಿಯನ್ನು ಪಡೆದ ನಾನೇ ಧನ್ಯ. ಹ್ಯಾಪಿ ಫಾದರ್ಸ್ ಡೇ ಎಂದು ವಿಶ್ ಮಾಡಿದ್ದಾರೆ.
ಅಕ್ಷಯ್ ಕುಮಾರ್, ತನ್ನ ತಂದೆ, ಮಗ ಆರವ್ ಮತ್ತು ಮಗಳು ನಿತಾರಾ ಇರುವ ಮೂರು ಫೋಟೋಗಳನ್ನು ಕೊಲಾಜ್ ಮಾಡಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ‘ನನ್ನ ತಂದೆ ನನಗೆ ಪ್ರೀತಿಯ ಸಾಗರವನ್ನೇ ನೀಡಿದ್ದಾರೆ. ಆ ಸಾಗರದ ಕೆಲ ಹನಿಗಳನ್ನು ನನ್ನ ಮಕ್ಕಳಿಗೂ ರವಾನಿಸಲು ಸಾಧ್ಯವಾದರೆ, ಅದೇ ನಾನು ಮಾಡುವ ಉತ್ತಮ ಕೆಲಸ. #FathersDay ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Fathers Day: ಈ ಹೆಣ್ಮಕ್ಕಳ ಸಾಧನೆಯ ಹಿಂದಿದ್ದಾರೆ ಅಪ್ಪ ಎಂಬ ಮಹಾನ್ ಚೇತನ..!
ತನ್ನ ತಂದೆ ನಿರ್ದೇಶಕ ಶಾಮ್ ಕೌಶಲ್ ಅವರೊಂದಿಗೆ ನಿಂತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ವಿಕಿ ಕೌಶಲ್ ಹಂಚಿಕೊಂಡಿದ್ದಾರೆ.
ಯಾಮಿ ಗೌತಮ್ ತನ್ನ ಮದುವೆಯ ಸಂದರ್ಭದಲ್ಲಿ ತಂದೆಯೊಂದಿಗಿರುವ ಫೋಟೋ ಪೋಸ್ಟ್ ಮಾಡಿದ್ದು, ಹ್ಯಾಪಿ ಫಾದರ್ಸ್ಡೇ ಪಪ್ಪಾ.. ಲವ್ ಯೂ ಎಂದು ಬರೆದುಕೊಂಡಿದ್ದಾರೆ. ಇತರ ತಾರೆಗಳಾದ ಸೋನು ಸೂದ್, ಪ್ರೀತಿ ಜಿಂಟಾ, ರಕುಲ್‌ಪ್ರೀತ್ ಸಿಂಗ್, ಫರಾ ಖಾನ್ ಸೇರಿ ಮತ್ತಿತರರು ತಮ್ಮ ತಂದೆಯಂದಿರಿಗೆ ವಿಶ್ ಮಾಡಿದ್ದಾರೆ.