ಮುಂಬೈ :ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ಪೊಲೀಸ್ ಸಿಬ್ಬಂದಿಗೆ ನೆರವಾಗಲು ತಮ್ಮ ಚಲನಚಿತ್ರ ಕಂಪನಿ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಮೂಲಕ ಮುಂಬೈ ಪೊಲೀಸ್ ಫೌಂಡೇಶನ್ಗೆ ಸಹಾಯ ಮಾಡುವುದಾಗಿ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಹೇಳಿದ್ದಾರೆ.
ಮುಂಬೈ ಪೊಲೀಸ್ ಫೌಂಡೇಶನ್ಗೆ ನೆರವು ನೀಡುವುದಾಗಿ ನಟ ಫರ್ಹಾನ್ ಅಖ್ತರ್ ಭರವಸೆ - ಎಕ್ಸೆಲ್ ಎಂಟರ್‌ಟೈನ್‌ಮೆಂಟ್
ಚಲನ ಚಿತ್ರ ನಿರ್ಮಾಣ ಸಂಸ್ಥೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಮೂಲಕ ಮುಂಬೈ ಪೊಲೀಸ್ ಫೌಂಡೇಶನ್ಗೆ ನೆರವು ನೀಡುವುದಾಗಿ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ತಿಳಿಸಿದ್ದಾರೆ.
![ಮುಂಬೈ ಪೊಲೀಸ್ ಫೌಂಡೇಶನ್ಗೆ ನೆರವು ನೀಡುವುದಾಗಿ ನಟ ಫರ್ಹಾನ್ ಅಖ್ತರ್ ಭರವಸೆ Farhan Akhtar pledges to contribute to Mumbai Police Foundation](https://etvbharatimages.akamaized.net/etvbharat/prod-images/768-512-7034190-736-7034190-1588432813954.jpg)
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮಗಾಗಿ ಕಾವಲು ಕಾಯುವವರ ಸೇವೆಗೆ ಸೆಲ್ಯೂಟ್. ಯಾವಾಗಲೂ ಅವರ ನಿಸ್ವಾರ್ಥ ಸೇವೆಯ ಮಟ್ಟವನ್ನು ಅಳೆಯಲು ಸಾಧ್ಯವಿಲ್ಲ, ಆದರೆ ಖಂಡಿತವಾಗಿಯೂ ನಾವು ಅವರಿಗೆ ಬೆನ್ನೆಲುಬಾಗಿ ನಿಲ್ಲಬಹುದು. ಎಕ್ಸೆಲ್ ಮುಖಾಂತರ ಮುಂಬೈ ಪೊಲೀಸರಿಗೆ ಸಹಾಯ ಮಾಡುವುದಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ. ನಿಮ್ಮ ನಿಲುವೇನು ಎಂದು ಬರೆದುಕೊಂಡಿದ್ದಾರೆ.
ಚಲನಚಿತ್ರ ನಿರ್ಮಾಣ ಸಂಸ್ಥೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಫರ್ಹಾನ್ ಅಖ್ತರ್ ಮತ್ತು ನಿರ್ಮಾಪಕ ರಿತೇಶ್ ಸಿಧ್ವಾನಿ ಒಡೆತನದಲ್ಲಿದೆ. ಈ ವಾರದ ಆರಂಭದಲ್ಲಿ ನಟ ಅಕ್ಷಯ್ ಕುಮಾರ್ ಕೂಡ ಮುಂಬೈ ಪೊಲೀಸ್ ಫೌಂಡೇಶನ್ಗೆ 2 ಕೋಟಿ ರೂ. ದೇಣಿಗೆ ನೀಡಿದ್ದರು.