ಪ್ರತಿ ಅಭಿಮಾನಿಗಳಿಗೂ ಜೀವನದಲ್ಲಿ ಒಮ್ಮೆ ತಮ್ಮ ಮೆಚ್ಚಿನ ನಟ-ನಟಿಯನ್ನು ನೋಡಬೇಕು. ಅವರೊಂದಿಗೆ ಮಾತನಾಡಬೇಕು, ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಅದು ಸ್ವಲ್ಪ ಕಷ್ಟದ ಕೆಲಸ. ಆದರೆ ಆ ಅಭಿಮಾನಿಗೆ ತಮ್ಮ ಮೆಚ್ಚಿನ ನಟ-ನಟಿಯ ಮನೆಯಲ್ಲಿ ಒಂದು ದಿನ ಅತಿಥಿಯಾಗಿ ಉಳಿದುಕೊಳ್ಳಲು ಅವಕಾಶ ದೊರೆತರೆ...?
ಶಾರುಖ್ ಖಾನ್ ಮನೆಗೆ ನೀವು ಅತಿಥಿಯಾಗಿ ಹೋಗಬೇಕಾ...ಹಾಗಿದ್ದಲ್ಲಿ ಹೀಗೆ ಮಾಡಿ...! - Shah Rukh Khan Delhi house
ಏರ್ ಬಿಎನ್ಬಿ ಸಂಸ್ಥೆಯು ಶಾರುಖ್ ಖಾನ್ ಅಭಿಮಾನಿಗಳಿಗಾಗಿ ಒಂದು ಭರ್ಜರಿ ಆಫರ್ ನೀಡಿದೆ. ದೆಹಲಿಯಲ್ಲಿರುವ ಶಾರುಖ್ ಮನೆಗೆ ಹೋಗಿ ಒಂದು ದಿನ ಅತಿಥಿಯಾಗಿ ಉಳಿದುಕೊಳ್ಳುವ ಅವಕಾಶವನ್ನು ಸಂಸ್ಥೆ ಅಭಿಮಾನಿಗಳಿಗೆ ನೀಡುತ್ತಿದೆ. ಆಸಕ್ತರು ನವೆಂಬರ್ 30 ಒಳಗಾಗಿ ಅರ್ಜಿ ಸಲ್ಲಿಸಬೇಕಿದೆ.
ಸಿನಿಮಾ ಸ್ಟಾರ್ಗಳ ಮನೆಯಲ್ಲಿ, ಅದೂ ಒಂದು ದಿನ ಅತಿಥಿಯಾಗಿ ಅಭಿಮಾನಿಗಳು, ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರ..? ಇದು ಖಂಡಿತ ಸಾಧ್ಯ. ಈ ಅವಕಾಶವನ್ನು ನಿಮಗೆ ಬಾಲಿವುಡ್ ಕಿಂಗ್ಖಾನ್ ಶಾರುಖ್ ನೀಡುತ್ತಿದ್ದಾರೆ. ಶಾರುಖ್ ಪತ್ನಿ ಗೌರಿಖಾನ್ ಅತಿಥಿಗಳಿಗಾಗಿ ಅವರ ಮನೆಯನ್ನು ಸಿಂಗರಿಸಿ ಕಾಯುತ್ತಿದ್ದಾರೆ. ಇದು ನಿಜ, ಈ ಬಗ್ಗೆ ಶಾರುಖ್ ಖಾನ್ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ದೆಹಲಿಯಲ್ಲಿರುವ ಶಾರುಖ್ ಮನೆಗೆ ನೀವು ಹೋಗಬಹುದು. ಏರ್ ಬಿಎನ್ಬಿ ಎಂಬ ಅಮೆರಿಕದ ವೆಕೇಷನ್ ರೆಂಟ್ ಆನ್ಲೈನ್ ಸಂಸ್ಥೆ ನಿಮಗೆ ಈ ಅವಕಾಶ ನೀಡುತ್ತಿದೆ. ಈ ಬಗ್ಗೆ ಬರೆದುಕೊಂಡಿರುವ ಶಾರುಖ್ "ನಾನು ಮದುವೆಗೂ ಮುನ್ನ ಗೌರಿಯನ್ನು ಮೊದಲ ಬಾರಿ ಭೇಟಿ ಮಾಡಿದ್ದು ದೆಹಲಿಯಲ್ಲಿ. ಈ ಸ್ಥಳ ನಮ್ಮ ಹೃದಯಕ್ಕೆ ಬಹಳ ಹತ್ತಿರವಾದದ್ದು. ಏರ್ ಬಿಎನ್ಬಿ ನಮ್ಮ ಮನೆಗೆ ಬರುವ ಅವಕಾಶವನ್ನು ನಿಮಗೆ ನೀಡುತ್ತಿದೆ" ಎಂದು ಶಾರುಖ್ ಖಾನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನೀವೂ ಕೂಡಾ ಶಾರುಖ್ ಖಾನ್ ಮನೆಗೆ ಹೋಗಿ ಒಂದು ದಿನ ಅತಿಥಿಯಾಗಿ ಉಳಿದುಕೊಳ್ಳಬೇಕು ಎಂಬ ಆಸೆ ಇದ್ದಲ್ಲಿ ನವೆಂಬರ್ 30 ಒಳಗೆ ಅರ್ಜಿ ಸಲ್ಲಿಸಬಹುದು ಎಂಧು ಏರ್ ಬಿಎನ್ಬಿ ತಿಳಿಸಿದೆ. ಆಲ್ ದಿ ಬೆಸ್ಟ್ ......