ದಟ್ಟ ರಾತ್ರಿಯ ಮಧ್ಯಯೂ ನಡೆದುಕೊಂಡು ಬಂದ ಅಭಿಮಾನಿ ಪರ್ಬಾತ್ಗೆ ನಟ ಅಕ್ಷಯ್ ಕುಮಾರ್, ಇಂತಹ ಕೆಲಸಕ್ಕೆ ಮತ್ತೆ ಯಾವುತ್ತೂ ಕೈ ಹಾಕದಿರು ಎಂದು ಇದೇ ವೇಳೆ ತಿಳುವಳಿಕೆಯ ಮಾತುಗಳನ್ನುಹೇಳಿದ್ದಾರಂತೆ. ಇದಕ್ಕೆ ಅಭಿಮಾನಿ ಪರ್ಬತ್ ನನ್ನ ಜೀವಮಾನದ ಕನಸು ಈಡೇರಿತು. ಮತ್ತೆ ಇಂತಹ ಹರಸಾಹಸ ಮಾಡುವುದಿಲ್ಲ ಎಂದಿದ್ದಾನೆ. ಇನ್ನು ಟ್ವೀಟ್ರ್ನಲ್ಲಿ ಕೃತಜ್ಞತೆ ಸಲ್ಲಿಸಿರುವ ಅಕ್ಕಿ, ನಿಮ್ಮ ಶ್ರಮವನ್ನು ನಿಮ್ಮ ಜೀವನ ಉತ್ತಮಗೊಳಿಸಲು ಉಪಯೋಗಿಸಿಕೊಳ್ಳಿ. ನನಗೆ ಅದೇ ಕೊಡುಗೆ ಎಂದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಭೇಟಿ ಮಾಡಲು ಅಭಿಮಾನಿಯೋರ್ವ 1 ಕಿ.ಮೀ. ಅಲ್ಲ, 2 ಕಿ.ಮೀ. ಅಲ್ಲ, ಬರೋಬ್ಬರಿ 900 ಕಿ.ಮೀ. ನಡೆದುಕೊಂಡೇ ಬಂದಿದ್ದಾನೆ. ಪರ್ಬಾತ್ ಎಂಬ ಅಭಿಮಾನಿ ತನ್ನ ನೆಚ್ಚಿನ ನಟ ಅಕ್ಕಿಯನ್ನು ನೋಡಲು ದ್ವಾರಕಾದಿಂದ ಮುಂಬೈಗೆ ನಡೆದುಕೊಂಡೇ ಬಂದಿದ್ದಾನೆ. ಸತತ 18 ದಿನಗಳ ಕಾಲ ಪಾದಯಾತ್ರೆ ಮಾಡಿರುವ ಈ ಅಭಿಮಾನಿ ಕೊನೆಗೂ ತನ್ನ ಗುರಿಯನ್ನು ತಲುಪಿ ನಗೆ ಬೀರಿದ್ದಾನೆ.