ಕರ್ನಾಟಕ

karnataka

ETV Bharat / sitara

ಫೇಕ್ ಫ್ರೆಂಡ್​ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡೋ ಮುನ್ನ ಈ ಸಿನಿಮಾ ನೋಡಿ! - ಡ್ರೀಮ್ ಗರ್ಲ್​​ ಚಿತ್ರದ ಟ್ರೇಲರ್

ನಟ ಆಯುಷ್ಮಾನ್ ಖುರಾನಾ ನಟಿಸಿರುವ 'ಡ್ರೀಮ್ ಗರ್ಲ್​' ಸಿನಿಮಾ ಸೆಪ್ಟೆಂಬರ್ 13 ರಂದು ಬಿಡುಗಡೆಯಾಗುತ್ತಿದೆ.

Dream Girl Movie

By

Published : Aug 20, 2019, 7:22 PM IST

ಆಯುಷ್ಮಾನ್ ಖುರಾನಾ ನಟಿಸಿರುವ 'ಡ್ರೀಮ್ ಗರ್ಲ್'​​ ಚಿತ್ರದ ಟ್ರೇಲರ್ ಬಿಟೌನ್​​​ಲ್ಲಿ ಸಿಕ್ಕಾಪಟ್ಟೆ ಟಾಕ್ ಶುರು ಮಾಡಿದೆ. ಔಟ್​ ಆ್ಯಂಡ್ ಔಟ್ ಕಾಮಿಡಿ ಕಥಾಹಂದರದ ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆ ದುಪ್ಟಟ್ಟುಗೊಳಿಸಿದೆ.

ಈ ವರ್ಷ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಡ್ರೀಮ್ ಗರ್ಲ್​​. ಟ್ರೇಲರ್​ನಲ್ಲಿ ಅನಾವರಣಗೊಂಡಿರುವಂತೆ ಪಕ್ಕಾ ಎಂಟರ್​ಟ್ರೈನರ್​ ಮೂವಿ. ಹಾಸ್ಯದ ಹೊನಲು ಹರಿಸುವ ಈ ಚಿತ್ರಕ್ಕೆ ಸ್ಫೂರ್ತಿ ಏನು ಎಂಬುದು ಇದೀಗ ರಿವೀಲ್ ಆಗಿದೆ.

ಇತ್ತೀಚಿಗೆ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಡ್ರೀಮ್ ಗರ್ಲ್​ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಹೇಳಿದ್ದಾರೆ ನಿರ್ದೇಶಕ ರಾಜ್ ಶಾಂಡಿಲ್ಯ. ಚಿತ್ರದ​ ಕಥೆಗೆ ಫೇಕ್ ಫೇಸ್​ಬುಕ್ ಅಕೌಂಟ್​​ಗಳೇ ಸ್ಫೂರ್ತಿಯಂತೆ. ಹುಡುಗಿಯರ ಹೆಸರಿನ ಸಾಕಷ್ಟು FB ಅಕೌಂಟ್​​ಗಳು ಸಕ್ರಿಯವಾಗಿರುತ್ತವೆ. ಎಲ್ಲರೂ ಕೂಡ ಒಂದಿಲ್ಲೊಂದು ನಕಲಿ​ ಹೆಸರಿನ ಫ್ರೆಂಡ್​ ರಿಕ್ವೆಸ್ಟ್ ಸ್ವೀಕರಿಸಿರುತ್ತಾರೆ. ಇಂತಹ ನಕಲಿ ಅಕೌಂಟ್​​ಗಳು ಹುಡುಗರನ್ನು ಮೋಸ ಮಾಡುತ್ತವೆ, ಹಣ ಪೀಕುತ್ತವೆ. ಇದನ್ನೇ ಹಾಸ್ಯವಾಗಿ ತೋರಿಸಿದ್ದೇವೆ. ನಮ್ಮ ಉದ್ದೇಶ ನೋಡುಗರನ್ನು ಎಂಟರ್​ಟ್ರೈನ್​ ಮಾಡುವುದೊಂದೆ ಎಂದಿದ್ದಾರೆ ನಿರ್ದೇಶಕರು.

ಡ್ರೀಮ್ ಗರ್ಲ್​ ಚಿತ್ರದಲ್ಲಿ ನಟ ಆಯುಷ್ಮಾನ್ ಖುರನಾ ಪೂಜಾ ಹೆಸರಿನಲ್ಲಿ ಕಸ್ಟಮರ್ ಕೇರ್​ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಟ್ರೇಲರ್​ನಲ್ಲಿ ಕಂಡಂತೆ ಅವರ ಈ ಪಾತ್ರ ಸಖತ್ ವರ್ಕೌಟ್ ಆಗಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತೆ. ​

ABOUT THE AUTHOR

...view details