ಚಂಡೀಗಡ್ : 'ಮಕ್ಕಳ ಚುನಾವಣಾ ಕ್ಯಾಂಪೇನ್' ವಿಡಿಯೋ ಶೇರ್ ಮಾಡಿ, ಚಂಡೀಘಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಿರಣ್ ಖೇರ್ ಫಜೀತಿಗೆ ಸಿಲುಕಿದ್ದಾರೆ. ಈ ಬಗ್ಗೆ 24 ಗಂಟೆಯಲ್ಲಿ ಸ್ಪಷ್ಟನೆ ನೀಡುವಂತೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ.
ಕಿರಣ್, ಪುಟ್ಟ ಮಕ್ಕಳು 'ವೋಟ್ ಫಾರ್ ಕಿರಣ್ ಖೇರ್ ಹಾಗೂ ಅಬ್ ಕಿ ಬಾರ್ ಮೋದಿ ಸರ್ಕಾರ್' ಎಂದು ಘೋಷಣೆ ಕೂಗಿರುವ ವಿಡಿಯೋ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ನೋಟಿಸ್ ನೀಡಿ 24 ಗಂಟೆ ಗಡವು ನೀಡಿದೆ.