ಹೈದರಾಬಾದ್:ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಬಹು ನಿರೀಕ್ಷಿತ ಚಿತ್ರ ರಾಧೆಯನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವುದಾಗಿ ಸಿನಿಮಾ ಪ್ರದರ್ಶಕರ ಸಂಘಕ್ಕೆ ಭರವಸೆ ನೀಡಿದ ನಂತರ ಚಿತ್ರ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.
ಪ್ರಭುದೇವ ನಿರ್ದೇಶನದ ರಾಧೆ 2020ರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದ ರಿಲೀಸ್ ತಡವಾಗಿದೆ. ರಾಧೆ ಚಿತ್ರವನ್ನು ಓಟಿಟಿ ಪ್ಲಾಟ್ ಫಾರಂ ನಲ್ಲಿ ಬಿಡುಗಡೆ ಮಾಡುವ ಸುದ್ದಿ ಹರಡಿದಾಗ ಸಿನೆಮಾ ಹಾಲ್ ಮಾಲೀಕರ ಸಂಘಗಳು ಸಲ್ಲುಗೆ ಪತ್ರ ಬರೆದು 2021ರ ಈದ್ ಹಬ್ಬದಂದು ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವಂತೆ ಕೋರಿ ಪತ್ರ ಬರೆದಿದ್ದರು. ಅವರ ವಿನಂತಿಯ ಮೇರೆಗೆ ಸಲ್ಲು ಭಾಯ್ ಈದ್ ಹಬ್ಬದಂದೇ ರಾಧೆ ಚಿತ್ರ ಮಂದಿಕ್ಕೆ ಬರುವುದಾಗಿ ಘೋಷಿಸಿದ್ದಾರೆ.