ಮುಂಬೈ:2016ರಿಂದ ಸದ್ದು ಮಾಡುತ್ತಿರುವ 'ಪನಾಮ ಪೇಪರ್ಸ್ ಲೀಕ್' ಪ್ರಕರಣ ಸಂಬಂಧಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದರು.
ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅವರು, ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿದ್ದಾರೆ.
ಪ್ರಕರಣ ಸಂಬಂಧ ಈ ಹಿಂದಿಯೇ ಎರಡು ಬಾರಿ ನಟಿಗೆ ನೋಟಿಸ್ ನೀಡಲಾಗಿತ್ತು. ಆದರೆ ಐಶ್ವರ್ಯಾ ವಿಚಾರಣೆಗೆ ಹಾಜರಾಗದೆ ಬೇರೆ ದಿನ ನಿಗದಿ ಮಾಡುವಂತೆ ಮನವಿ ಮಾಡಿದ್ದರು. ಹೀಗಾಗಿ ಇದೀಗ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಲಾಗಿದ್ದು, ನಟಿಯ ಹೇಳಿಕೆಯನ್ನುಇಡಿ ದಾಖಲಿಸಿಕೊಂಡಿದೆ.
ಇದನ್ನೂ ಓದಿ: ಎಂದಿಗೂ ಮಾಸದ ಸೌಂದರ್ಯದ ಖನಿ....ಐಶ್ ಬೇಬಿ ಫೋಟೋಗಳು
What is this Panama papers leak case?
2016 ರಲ್ಲಿ ಲಕ್ಷಾಂತರ ದಾಖಲೆಗಳನ್ನು ಕದ್ದು ಮಾಧ್ಯಮಗಳಿಗೆ ಸೋರಿಕೆ ಮಾಡಿರುವ ವಿಚಾರದ ತನಿಖೆ ಇದಾಗಿದೆ. ವಿಶ್ವದ ಶ್ರೀಮಂತ ವ್ಯಕ್ತಿಗಳು ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಕಡಲಾಚೆ ಖಾತೆಗಳನ್ನು, ಕಂಪನಿಗಳನ್ನು ಸ್ಥಾಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಬಾಲಿವುಡ್ ತಾರೆಗಳು, ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಪಟುಗಳು ಮತ್ತು ಹಲವಾರು ಪ್ರತಿಷ್ಠಿತ ವ್ಯಕ್ತಿಗಳು ಸೇರಿದಂತೆ ಕನಿಷ್ಠ 500 ಭಾರತೀಯರು ಸಾಗರೋತ್ತರ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಸಂಗ್ರಹಿಸಿಟ್ಟಿದ್ದಾರೆ. ತೆರಿಗೆ ಪಾವತಿಯನ್ನು ತಪ್ಪಿಸುವುದಕ್ಕಾಗಿ ಅವರು ತಮ್ಮ ಲೆಕ್ಕವಿಲ್ಲದ ಹಣವನ್ನು ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಇರಿಸಿದ್ದರು. ಪನಾಮಾ ಪೇಪರ್ ಸೋರಿಕೆ ಪ್ರಕರಣದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ನಟ ಅಜಯ್ ದೇವಗನ್ ಹೆಸರು ಕೂಡ ಕೇಳಿಬಂದಿತ್ತು.