ಕರ್ನಾಟಕ

karnataka

ETV Bharat / sitara

ಅಕ್ರಮ ಹಣ ವರ್ಗಾವಣೆ ಆರೋಪ ; ಇಡಿ ವಿಚಾರಣೆಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್ - ಜಾಕ್ವೆಲಿನ್ ಫರ್ನಾಂಡಿಸ್ ವಿಚಾರಣೆ

ಸ್ಯಾಂಡಲ್​ವುಡ್​ನ ಬಿಗ್​ ಬಜೆಟ್​ ಸಿನಿಮಾ ವಿಕ್ರಾಂತ್​ ರೋಣದಲ್ಲಿ ನಟ ಸುದೀಪ್​ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದು, ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ. ಇದರ ನಡುವೆ ಇಂದು ಇಡಿ ವಿಚಾರಣೆ ಮಾಡಿದೆ..

ED questions B-town diva Jacqueline Fernandez in money laundering cas
ನಟಿ ಜಾಕ್ವೆಲಿನ್ ಫರ್ನಾಂಡಿಸ್

By

Published : Aug 30, 2021, 8:06 PM IST

Updated : Aug 30, 2021, 8:15 PM IST

ಹೊಸದಿಲ್ಲಿ :ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ)ವು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ರಾಷ್ಟ್ರ ರಾಜಧಾನಿಯಲ್ಲಿ ಇಂದು (ಸೋಮವಾರ) ವಿಚಾರಣೆ ನಡೆಸಿತು.

ನಟಿ ಜಾಕ್ವೆಲಿನ್ ಫರ್ನಾಂಡಿಸ್

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಎದುರಿಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ದೆಹಲಿಯ ಕಚೇರಿಗೆ ಕರೆಸಿಕೊಂಡು ವಿಚಾರಣೆ ಮಾಡಲಾಯಿತು ಎಂದು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಮಾಧ್ಯಮದವರಿಗೆ ತಿಳಿಸಿದ್ದಾರೆ. ಅಧಿಕಾರಿಗಳು ಪ್ರಕರಣದ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.

ಸ್ಯಾಂಡಲ್​ವುಡ್​ನ ಬಿಗ್​ ಬಜೆಟ್​ ಸಿನಿಮಾ ವಿಕ್ರಾಂತ್​ ರೋಣದಲ್ಲಿ ನಟ ಸುದೀಪ್​ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದು, ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ. ಇದರ ನಡುವೆ ಇಂದು ಇಡಿ ವಿಚಾರಣೆ ಮಾಡಿದೆ.

Last Updated : Aug 30, 2021, 8:15 PM IST

ABOUT THE AUTHOR

...view details