ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಮಾದಕ ವಸ್ತು ನಿಯಂತ್ರಣ ದಳ(ಎನ್ಸಿಬಿ)ಯಿಂದ ವಿಚಾರಣೆಗೊಳಪಟ್ಟಿರುವ ನಟಿ ದೀಪಿಕಾ ಪಡುಕೊಣೆ, ಸಾರಾ ಅಲಿ ಖಾನ್ ಹಾಗೂ ರಕುಲ್ ಪ್ರೀತಿ ಸಿಂಗ್ ಅವರ ಮೊಬೈಲ್ ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
6 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ನಟಿ ದೀಪಿಕಾ, ಸಾರಾ, ಶ್ರದ್ಧಾ ಕಪೂರ್!
ಸುಮಾರು 6 ಗಂಟೆಗಳಿಗೂ ಅಧಿಕ ಕಾಲ ನಟಿಮಣಿಯರು ಎನ್ಸಿಬಿ ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟಿದ್ದು, ಈ ವೇಳೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ಇವರ ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್ ಪ್ರಕರಣ ವಿಚಾರಣೆ ಇದೀಗ ಮತ್ತಷ್ಟು ಚುರುಕುಗೊಂಡಿದ್ದು, ಈಗಾಗಲೇ ಅನೇಕರ ವಿಚಾರಣೆ ನಡೆಸಲಾಗುತ್ತಿದೆ. ಇದರ ಮಧ್ಯೆ ಮಾದಕ ವಸ್ತು ಪ್ರಕರಣದಲ್ಲಿ ತಮಗೆ ಸಂಬಂಧಿಸಿದ ಯಾವುದೇ ಲೇಖನ ಅಥವಾ ಬರಹಗಳು ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಅಥವಾ ಪ್ರಕಟಿಸಬಾರದು ಎಂದು ಖಚಿತಪಡಿಸುವಂತೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.